ರಾಕೆಟ್ ನಿಂದ ಸೆಲ್ಫೀ ನೋಡಿದಿರಾ? 104 ಉಪಗ್ರಹಗಳು ಬೇರ್ಪಟ್ಟಿದ್ದು ಹೀಗೆ..!

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಒಂದೇ ರಾಕೆಟ್ ಮೂಲಕ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ವಿಶ್ವದಾಖಲೆ ಬರೆದದ್ದು ನಮಗೆಲ್ಲಾ ತಿಳಿದಿದೆ. ಉಪಗ್ರಹಗಳನ್ನು ಹೊತ್ತೊಯ್ದ ಪಿಎಸ್ಎಲ್ವಿ-ಸಿ37 ರಾಕೆಟ್ ನಿಂದ ಸೆಲ್ಫಿ ವಿಡಿಯೋ ಸಿಕ್ಕಿದೆ. ಹೇಗೆ ಸಾಧ್ಯವಾಯಿತು ಅಂತೀರಾ? ರಾಕೆಟ್ ಗೆ ನಮ್ಮ ವಿಜ್ಞಾನಿಗಳು ಹೈ ರೆಸಲ್ಯೂಷನ್ ಕ್ಯಾಮೆರಾ ಅಳವಡಿಸಿದ್ದರು. ಆಂದ್ರ ಪ್ರದೇಶದ ಶ್ರೀಹರಿಕೋಟಾದಿಂದ ರಾಕೆಟ್ ಲಾಂಚ್ ಆದ ಕ್ಷಣದಿಂದಲೂ ಆ ಕ್ಯಾಮೆರಾ ಅದ್ಭುತವಾದ ಸೆಲ್ಫೀ ವೀಡಿಯೋ ಚಿತ್ರೀಕರಿಸಿದೆ. ಉಡಾವಣೆ ಆರಂಭಗೊಂಡ 18 ನಿಮಿಷಗಳಲ್ಲಿ ಭಾರತೀಯ ಉಪಗ್ರಹಗಳು ಕಕ್ಷೆಗೆ ಸೇರಿದ ನಂತರ, 600 ಸೆಕೆಂಡುಗಳಲ್ಲಿ ಉಳಿದ 101 ಉಪಗ್ರಹಗಳು ಕಕ್ಷೆಗೆ ಸೇರಿದವು. ವೀಡಿಯೋದಲ್ಲಿ ಉಪಗ್ರಹಗಳ ರಾಕೆಟ್ ನಿಂದ ಬೇರ್ಪಟ್ಟ ದೃಶ್ಯಗಳೊಂದಿಗೆ, ಸುಂದರವಾದ ಭೂಮಿಯ ದೃಶ್ಯಗಳನ್ನೂ ನಾವು ಕಾಣಬಹುದು. ಬಾಹ್ಯಾಕಾಶದಲ್ಲಿ ರಾಕೆಟ್ ನಿಂದ ತೆಗೆದ ವೀಡಿಯೋ ಇದು… ನೋಡಿ..