ಲಾಲೂ ನೀವೊಬ್ಬರೇ ಬಿಜೆಪಿ ಎದುರಿಸಲಾಗದು, ನಾನೂ ಬರ್ತೀನಿ: ಓವೈಸಿ |News Mirchi

ಲಾಲೂ ನೀವೊಬ್ಬರೇ ಬಿಜೆಪಿ ಎದುರಿಸಲಾಗದು, ನಾನೂ ಬರ್ತೀನಿ: ಓವೈಸಿ

ಬಿಹಾರದಲ್ಲಿ ಮೈತ್ರಿ ಸರ್ಕಾರ ಮುರಿದುಬಿದ್ದು ಅಧಿಕಾರದಿಂದ ದೂರವುಳಿದಿರುವ ಆರ್.ಜೆ.ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸ್ನೇಹ ಹಸ್ತ ಚಾಚಿದ್ದಾರೆ.

ಹೈದರಾಬಾದಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಓವೈಸಿ, “ಲಾಲೂ ಯಾದವ್, ನೀವು ಏಕಾಂಗಿಯಾಗಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ. ಬಿಹಾರದಲ್ಲಿ ಮುಸ್ಲಿಮರ ಅಭವೃದ್ಧಿಗೆ ಕೆಲಸ ಮಾಡುವ ಇಚ್ಛೆ ನಿಮಗಿದ್ದರೆ, ನಾವು ನಿಮ್ಮೊಂದಿಗೆ ಬರಲು ಸಿದ್ಧ. ಬಿಜೆಪಿ ಭಯದಿಂದ ನಾವು ಈ ಮಾತನ್ನು ಹೇಳುತ್ತಿದ್ದೇವೆ ಎಂದು ಮಾತ್ರ ಭಾವಿಸಬೇಡಿ” ಎಂದು ಹೇಳಿದ್ದಾರೆ.

ಒಡೆಯದು, ನೆನೆಯದು… ಸ್ಯಾಮ್ಸಂಗ್ ನ ಹೊಸ ಸ್ಮಾರ್ಟ್ ಫೋನ್

ಆರ್.ಜೆ.ಡಿ ಜೊತೆಗಿನ ಮೈತ್ರಿ ಕಡಿದುಕೊಂಡು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿದ ನಿತೀಶ್ ನಡೆಯನ್ನು ಟೀಕಿಸಿದ ಓವೈಸಿ, ಒಂದಲ್ಲ ಒಂದು ದಿನ ನಿತೀಶ್ ಬಿಜೆಪಿ ಸೇರುತ್ತಾರೆ ಎಂಬುದು ಗೊತ್ತಿತ್ತು ಎಂದರು. ಈ ಹಿಂದೆ ಸತ್ತರೂ ಸರಿ ಬಿಜೆಪಿ ಜೊತೆ ಹೋಗುವುದಿಲ್ಲ ಎನ್ನುತ್ತಿದ್ದ ನಿತೀಶ್, ಈಗ ಜ್ಯಾತ್ಯಾತೀತತೆಗಿಂದ ಭ್ರಷ್ಟಾಚಾರ ಪ್ರಮುಖ ವಿಷಯವೆನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓವೈಸಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಎಐಎಂಐಎಂ ಪಕ್ಷವೂ ಕೂಡಾ ಭ್ರಷ್ಟಾಚಾರದ ಪಕ್ಷವಾಗಿದ್ದು, ಲಾಲೂ ಪ್ರಸಾದ್ ಯಾದವ್ ಮತ್ತು ಓವೈಸಿ ಕೈಜೋಡಿಸುವ ವಿಷಯದಲ್ಲಿ ಆಶ್ಚರ್ಯ ಪಡುವಂತದ್ದೇನಿಲ್ಲ ಎಂದು ಹೇಳಿದೆ.

Loading...
loading...
error: Content is protected !!