ಕೊನೆಗೂ ಪಾಂಡವರು ಉಳಿದುಕೊಂಡಿದ್ದರೆನ್ನಲಾದ ಸ್ಥಳದಲ್ಲಿ ಉತ್ಖನನಕ್ಕೆ ಅನುಮತಿ – News Mirchi

ಕೊನೆಗೂ ಪಾಂಡವರು ಉಳಿದುಕೊಂಡಿದ್ದರೆನ್ನಲಾದ ಸ್ಥಳದಲ್ಲಿ ಉತ್ಖನನಕ್ಕೆ ಅನುಮತಿ

ಮೀರತ್: ಉತ್ತರಪ್ರದೇಶದಲ್ಲಿನ ಮೀರತ್ ಬಳಿ ಪಾಂಡವರು ವಾಸಿಸಿದ್ದ ಲಕ್ಷಾಗೃಹ ಇದೆ ಎಂಬ ವಾದಗಳು ಹಲವಾರು ವರ್ಷಗಳಿಂದ ಇವೆ. ಈ ಕುರಿತು ಸತ್ಯಾಸತ್ಯತೆ ಪರಿಶೀಲಿಸಲು ಅನುಮತಿ ನೀಡುವಂತೆ ಪುರಾತತ್ವ ಇಲಾಖೆ ವಿಜ್ಞಾನಿಗಳು, ಸ್ಥಳೀಯರು ಮನವಿ ಮಾಡುತ್ತಲೇ ಬಂದಿದ್ದರು. ಈ ಮನವಿಗಳ ಹಿನ್ನೆಲೆಯಲ್ಲಿ ಭೂಮಿ ಉತ್ಖನನಕ್ಕೆ ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಅನುಮತಿ ನೀಡಿದೆ. ಲಕ್ಷಾಗೃಹ ಇದೆ ಎಂದು ಭಾವಿಸುತ್ತಿರುವ ಪ್ರದೇಶ, ಉತ್ತರ ಪ್ರದೇಶದ ಭಾಗಪಟ್ ಜಿಲ್ಲೆಯಲ್ಲಿನ ಬರ್ನವಾ ಪ್ರದೇಶದಲ್ಲಿದೆ.

ಬರ್ನವಾ ಪ್ರದೇಶದ ಕುರಿತು ಮಾಜಿ ಪುರಾತತ್ವ ಇಲಾಖೆ ಹಿರಿಯ ಅಧಿಕಾರಿ ಕೆ.ಕೆ.ಶರ್ಮಾ ಮಾತನಾಡಿ, ಇಲ್ಲಿ ಲಕ್ಷಾಗೃಹ ಇದೆ ಎನ್ನಲು ಆಧಾರಗಳಿವೆ ಎಂದು ಹೇಳಿದ್ದಾರೆ. ಕೌರವರು ಈ ಅರಮನೆಯನ್ನು ನಿರ್ಮಿಸಿದ್ದು, ಇಲ್ಲಿ ಪಾಂಡವರನ್ನು ಜೀವಂತ ಸುಡಲು ಯೋಜಿಸಿದ್ದರು. ಆದರೆ ಪಾಂಡವರು ಸುರಂಗ ಮಾರ್ಗದ ಮೂಲಕ ಸುರಕ್ಷಿತವಾಗಿ ಹೊರಬಿದ್ದಿದ್ದರು ಎಂದು ಹೇಳಲಾಗುತ್ತದೆ. ಮಹಾಭಾರತಕ್ಕೆ ತಿರುವು ನೀಡುವಲ್ಲಿ ಲಕ್ಷಾಗೃಹದ ಪಾತ್ರ ಮಹತ್ವದ್ದು ಎಂದು ಅವರು ಹೇಳಿದರು. ಬರ್ನಾವಾ ಪ್ರದೇಶವನ್ನೇ ಮಹಾಭಾರತದಲ್ಲಿ ವರುಣವಿರಾಟ್ ಎಂದು ಕರೆಯುತ್ತಾರೆಂದು ಅವರು ಹೇಳಿದರು.

ಬರ್ನಾವಾ ಪ್ರದೇಶದಲ್ಲಿ ಉತ್ಖನನ ಮಾಡುವಂತೆ ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದಿಂದ ಆದೇಶ ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಪ್ರದೇಶದಲ್ಲಿ ಇನ್ಸ್’ಟಿಟ್ಯೂಟ್ ಆಫ್ ಆರ್ಕಿಯಾಲಜಿ, ಪುರಾತತ್ವ ಉತ್ಖನನ ಇಲಾಖೆ ಜಂಟಿಯಾಗಿ ಸಂಶೋಧನೆ ನಡೆಸುತ್ತವೆ ಎಂದು ಹೇಳುತ್ತಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ಉತ್ಖನನ ಕಾರ್ಯ ಆರಂಭಿಸುತ್ತೇವೆ ಎಂದು ಆರ್ಕಿಯಾಲಜಿಲ್ ಸರ್ವೇ ಆಫ್ ಇಂಡಿಯಾ(ಉತ್ಖನನ ವಿಭಾಗ) ನಿರ್ದೇಶಕ ಜಿತೇಂದರ್ ನಾಥ್ ಹೇಳಿದ್ದಾರೆ.

ಈ ಕುರಿತು ಈಗಲೇ ಯಾವುದೇ ಪ್ರಕಟಣೆ ನೀಡುವುದು ಸರಿಯಲ್ಲ ಎಂದು ಇನ್ಸ್’ಟಿಟ್ಯೂಟ್ ಆಫ್ ಆರ್ಕಿಯಾಲಜಿಲ್ ನಿರ್ದೇಶಕ ಡಾ. ಎಸ್.ಕೆ.ಮುಂಜಾಲ್ ಹೇಳಿದ್ದಾರೆ. ಚಂಡಯಾನ್ ಪ್ರದೇಶದಲ್ಲಿ ಉತ್ಖನನ ಮಾಡುತ್ತಿದ್ದ ಸಮಯದಲ್ಲಿ ಕೆಂಪು ಕಲ್ಲಿನಿಂದ ಮಾಡಿದ್ದ ಮಣಿಗಳು, ತಾಮ್ರದ ಕಿರೀಟ ಹೊರಬಿದ್ದಿದ್ದವು ಎಂದು ಅವರು ಹೇಳಿದ್ದಾರೆ. ಈ ಕಿರೀಟವನ್ನು ಸ್ಥಳೀಯ ಪುರಾತತ್ವ ಇಲಾಖೆ ಅಧಿಕಾರಿ ಅಮಿತ್ ರಾಯ್ ಪತ್ತೆ ಹಚ್ಚಿದ್ದಾಗಿ ಅವರು ಹೇಳಿದರು. ಇಲ್ಲಿ ಕೆಸರು ನೀರಿನ ಜಲಪಾತ, ಅದರಡಿ ಬೃಹತ್ ಸುರಂಗಗಳಿವೆ ಎಂದು ಅಮಿತ್ ರಾಯ್ ಹೇಳಿದ್ದಾಗಿ ಅವರು ಹೇಳಿದ್ದಾರೆ.

ಈ ಸುರಂಗದ ಮೂಲಕವೇ ಪಾಂಡವರು ಲಕ್ಷಾಗೃಹದಿಂದ ತಪ್ಪಿಸಿಕೊಂಡಿದ್ದಾಗಿ ಹೇಳಲಾಗುತ್ತಿದೆ ಎಂದು ಅವರು ಹೇಳಿದರು. ಸಂಪೂರ್ಣ ಸಂಶೋಧನೆಯ ನಂತರವೇ ಮತ್ತಷ್ಟು ವಿವರಗಳು ಹೊರಗೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು.

Get Latest updates on WhatsApp. Send ‘Add Me’ to 8550851559

Loading...