ಅಲ್ಲಿ ಘರ್ಷಣೆ, ಇಲ್ಲಿ ಭಾರತವನ್ನು ಹೊಗಳಿದ ಚೀನಾ ಅಧ್ಯಕ್ಷ

ಕಳೆದ 19 ದಿನಗಳಿಂದ ಸಿಕ್ಕಿಂ ಗಡಿಯಲ್ಲಿ ಭಾರತ ಮತ್ತು ಚೀನಾಗಳ ನಡುವೆ ಉದ್ವಿಘ್ನ ವಾತಾವರಣ ನೆಲೆಸಿದ್ದು, ಎರಡೂ ದೇಶಗಳ ನಡುವೆ ಮಾತಿನ ಸಮರ ನಡೆಯುತ್ತಿದ್ದು ಮುಂದೇನು ಎಂಬ ಪ್ರಶ್ನೆ ಹುಟ್ಟುಹಾಕಿದೆ. ಆದರೆ ಯಾರೂ ನಿರೀಕ್ಷಿಸದ ರೀತಿಯಲ್ಲಿ ಚೀನಾ ಅಧ್ಯಕ್ಷ ಜಿನ್ ಪಿಂಗ್ ಭಾರತವನ್ನು ಕೊಂಡಾಡಿದ್ದಾರೆ.

ಭಯೋತ್ಪಾದನೆ ವಿರುದ್ಧ ಭಾರತ ಮಾಡುತ್ತಿರುವ ಹೋರಾಟ, ಉಗ್ರವಾದವನ್ನು ನಿರ್ಮೂಲನೆ ಮಾಡಲು ಭಾರತ ಪಡುತ್ತಿರುವ ಶ್ರಮ ದೊಡ್ಡದು ಎಂದು ಜಿ20 ಶೃಂಗಸಭೆಯಲ್ಲಿ ಜಿನ್ ಪಿಂಗ್ ಹೇಳಿದ್ದಾರೆ. ಬ್ರಿಕ್ಸ್ ದೇಶಗಳ ಒಕ್ಕೂಟದಲ್ಲೂ ಭಾರತದ ಪಾತ್ರ ತುಂಬ ಮಹತ್ವದ್ದಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಭಾರತ ಸಾಧಿಸುತ್ತಿರುವ ಅಭಿವೃದ್ಧಿ ಅಭಿನಂದನಾರ್ಹ ಎಂದ ಚೀನಾ ಅಧ್ಯಕ್ಷ, ಮುಂದಿನ ದಿನಗಳಲ್ಲಿ ಭಾರತ ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಮೋದಿ ಇಸ್ರೇಲ್ ಪ್ರವಾಸ, ಆತಂಕದಲ್ಲಿ ಪಾಕಿಸ್ತಾನ

ಜರ್ಮನಿಯ ಹೋಂಬರ್ಗ್ ನಲ್ಲಿ ಎರಡು ದಿನಗಳ ಕಾಲ ನಡೆಯುವ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಜಿನ್ ಪಿಂಗ್ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಬ್ರಿಕ್ಸ್ ದೇಶಗಳ ನಾಯಕರು ಕೂಡಾ ಒಂದು ತುರ್ತು ಸಭೆ ಸೇರಿದರು. ಈ ಸಂದರ್ಭದಲ್ಲಿ ಮೋದಿ, ಜಿನ್ ಪಿಂಗ್ ಪರಸ್ಪರ ಹಸ್ತಲಾಘವ ನೀಡಿ, ಆತ್ಮೀಯವಾಗಿ ಮಾತನಾಡಿಸಿದರು. ಅಷ್ಟೇ ಅಲ್ಲ ಸಭೆಯಲ್ಲಿ ಇಬ್ಬರೂ ಅಕ್ಕಪಕ್ಕ ಕುಳಿತಿದ್ದರು. ಈ ಸಂದರ್ಭದಲ್ಲಿ ಜಿನ್ ಪಿಂಗ್ ಮಾತನಾಡಿ, ಭಯೋತ್ಪಾದನೆ ವಿರುದ್ಧ ಭಾರತದ ನೀತಿಯನ್ನು ಹೊಗಳಿದರು. ಅದಕ್ಕೂ ಮುನ್ನ ಮಾತನಾಡಿದ ಮೋದಿ, ಜಿನ್ ಪಿಂಗ್ ನೇತೃತ್ವದಲ್ಲಿ ಬ್ರಿಕ್ಸ್ ನಿಗದಿತ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲು ಮುಂದುವರೆಯುತ್ತಿದೆ ಎಂದು ಅಭಿನಂದಿಸಿದರು. ಆದರೆ ಇವರಿಬ್ಬರ ನಡುವೆ ಯಾವುದೇ ಪ್ರತ್ಯೇಕ ಸಭೆ ನಡೆಯಲಿಲ್ಲ.

ಪ್ರಧಾನಿಯಾಗುವ ಹಂಬಲ ಇಲ್ಲ, ಜವಾಬ್ದಾರಿ ಮುಗಿದ ನಂತರ ಮಠಕ್ಕೆ