ಅಫ್ಜಲ್ ಗುರು ಸಾವಿಗೆ ಸೇಡಿನ ಮೊದಲ ಕಂತು!

ನಗ್ರೋಟಾ: ಜಮ್ಮು ಕಾಶ್ಮೀರದಲ್ಲಿ ಮಂಗಳವಾರ ಉಗ್ರರು ನಡೆಸಿದ ದಾಳಿಯಲ್ಲಿ 7 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಹೀಗಾಗಿ ಸೇನಾ ಶಿಬಿರಗಳ ಬಳಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಸೇನೆ ಕೂಂಬಿಂಗ್ ನಡೆಸುತ್ತಿದ್ದಾಗ ಘಟನೆ ನಡೆದ ಸ್ಥಳದಲ್ಲಿ ಸತ್ತ ಮೂವರು ಉಗ್ರರಿಗೆ ಸೇರಿದ್ದ ಕೆಲ ಪತ್ರಗಳು ಸಿಕ್ಕಿವೆ. ಉರ್ದು ಭಾಷೆಯಲ್ಲಿದ್ದ ಒಂದು ಕಾಗದದಲ್ಲಿ ಅಫ್ಜಲ್ ಗುರುವನ್ನು ಕೊಂದಿದ್ದಕ್ಕೆ ಸೇಡಿನ ಮೊದಲ ಕಂತು ಇದು ಎಂದು ಬರೆದಿದೆ.

ಅಷ್ಟೇ ಅಲ್ಲದೆ ಉಗ್ರರ ಬಳಿ ಪತ್ತೆಯಾದ ವಸ್ತುಗಳೆಲ್ಲವೂ ಭಾರತದಲ್ಲಿ ತಯಾರಾಗಿರುವುದು ತಿಳಿದು ಬಂದಿದೆ. ಹೀಗಾಗಿ ಉಗ್ರರಿಗೆ ಸ್ಥಳೀಯರ ಬೆಂಬಲ ಸಿಗುತ್ತಿದೆ ಎಂದು ಅಧಿಕಾರಿಗಳು ಭಾವಿಸುತ್ತಿದ್ದಾರೆ.

2011 ರಲ್ಲಿ ಸಂಸತ್ ಮೇಲೆ ನಡೆದ ದಾಳಿಯಲ್ಲಿ ಪ್ರಮುಖ ಆರೋಪಿಯಾಗಿದ್ದ ಅಫ್ಜಲ್ ಗುರುವನ್ನು ದೆಹಲಿಯಲ್ಲಿ 2013 ರಲ್ಲಿ ನೇಣಿಗೇರಿಸಿದ್ದರು.

ಜಮ್ಮು ಕಾಶ್ಮೀರದ ಚಮಿಲ್ಯಾಲ್ ಪ್ರದೇಶದಲ್ಲಿ ಸುರಂಗವೊಂದನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿದ್ದು, ಇದರ ಮೂಲಕವೇ ಉಗ್ರರು ಭಾರತದ ಗಡಿ ಪ್ರವೇಶಿಸಿರಬಹುದು ಎಂದು ಡಿಜಿ ಕೆಕೆ ಶರ್ಮ್ ಹೇಳಿದ್ದಾರೆ.

Related News

loading...
error: Content is protected !!