ರೆಹಮಾನ್ ಸಂಗೀತ ಕಾರ್ಯಕ್ರಮದಿಂದ ಹೊರ ನಡೆದ ಅಭಿಮಾನಿಗಳು.. ಆಗಿದ್ದೇನು?

ಭಾರತೀಯ ಚಲನಚಿತ್ರ ರಂಗದಲ್ಲಿ ತಮ್ಮ ಸಂಗೀತದ ಮೂಲಕ ಪ್ರಸಿದ್ಧರಾಗಿರುವ, ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್, ಚಲನಚಿತ್ರಗಳಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಹೆಸರುವಾಸಿಯಾಗಿದ್ದಾರೆ. ಈ ದಕ್ಷಿಣ ಭಾರತದ ಸಂಗೀತ ನಿರ್ದೇಶಕನಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಆದರೆ ಇತ್ತೀಚೆಗೆ ರೆಹಮಾನ್ ವೇದಿಕೆ ಮೇಲೆ ಹಾಡು ಹೇಳುತ್ತಿದ್ದರೆ ಹಲವು ಉತ್ತರ ಭಾರತದ ಸಂಗೀತಾಭಿಮಾನಿಗಳು ಮುನಿಸಿಕೊಂಡು ಕಾರ್ಯಕ್ರಮದಿಂದ ಹೊರನಡೆದ ಘಟನೆ ನಡೆದಿದೆ.

ಜುಲೈ 8 ರಂದು ಲಂಡನ್ ನಲ್ಲಿನ ವೆಂಬ್ಲೇಯಲ್ಲಿ ಒಂದು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು ಎ.ಆರ್.ರೆಹಮಾನ್. ಆ ಕಾರ್ಯಕ್ರಮ ಕುರಿತು ಭಾರೀ ಪ್ರಚಾರವೂ ನಡೆದಿತ್ತು. ಕಾರ್ಯಕ್ರಮಕ್ಕೆ ಹಿಂದಿ ಅಭಿಮಾನಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಆದರೆ ಕಾರ್ಯಕ್ರಮದಲ್ಲಿ ತಮಿಳು ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರಿಂದ, ಅಲ್ಲಿಗೆ ಬಂದ ಹಲವು ಉತ್ತರ ಭಾರತದ ಅಭಿಮಾನಿಗಳು ಬೇಸರ ಮಾಡಿಕೊಂಡರಂತೆ. ಎಲ್ಲಾ ತಮಿಳು ಹಾಡುಗಳೇ ಹಾಕ್ತಿದೀರಿ, ನಮಗೇನು ಅರ್ಥವಾಗುತ್ತೆ ಎಂದು ಅಲ್ಲಿ ಆಕ್ರೋಶ ವ್ಯಕ್ತಪಡಿಸಿದರಂತೆ. ಮತ್ತೆ ಕೆಲವರು ನಮ್ಮ ಟಿಕೆಟ್ ದುಡ್ಡು ನಮಗೆ ವಾಪಸ್ ಕೊಡಿ ಎಂದು ಒತ್ತಾಯಿಸಿದ್ದಾರೆ. ಕಾರ್ಯಕ್ರಮದುದ್ದಕ್ಕೂ ತಮಿಳು ಹಾಡುಗಳನ್ನು ಹಾಡಿದ ರೆಹಮಾನ್, ಕೇವಲ ಒಂದೆರಡು ಹಿಂದಿ ಹಾಡುಗಳನ್ನು ಹಾಡಿದ್ದರು.

ಚೀನಾವನ್ನು ಚಿಂದಿ ಮಾಡಬಲ್ಲ ತಾಕತ್ತು ಭಾರತಕ್ಕೆ… ಹೀಗಂದವರಾರು?

ಹಾಗೆ ಬೇಸರಿಸಿಕೊಂಡ ಹೊರಬಂದ ಕೆಲ ಅಭಿಮಾನಿಗಳು, ಸಾಮಾಜಿಕ ತಾಣಗಳಲ್ಲಿ ತಮ್ಮ ಆಕ್ರೋಶ ಮುಂದುವರೆಸಿದ್ದಾರೆ. ಸುಳ್ಳು ಪ್ರಚಾರ ಮಾಡಿ ನಮಗೆಲ್ಲಾ ಮೋಸ ಮಾಡಿದರು ಎಂದು ಕಿಡಿ ಕಾರುತ್ತಿದ್ದಾರೆ. ರೆಹಮಾನ್ ತಮಿಳಿನಿಂದ ಬಂದಿದ್ದರೂ, ಬಾಲಿವುಡ್ ಗೆ ಬಂದ ಮೇಲೆಯೇ ಹೆಸರು ಮಾಡಿದ್ದು, ಅಂತಹವರು ಹೀಗೆ ಮಾಡಬಹುದೇ ಎಂದು ಪ್ರಶ್ನಿಸುತ್ತಿದ್ದಾರೆ.

ಕಾರ್ಯಕ್ರಮಕ್ಕೂ ಮುನ್ನವೇ 16 ಹಿಂದಿ ಹಾಡುಗಳು, 12 ತಮಿಳು ಹಾಡುಗಳ ಪಟ್ಟಿಯನ್ನು ಮೊದಲೇ ಸಿದ್ಧಪಡಿಸಿ ನೀಡಲಾಗಿತ್ತು. ಎಂದು ಆ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದವರಲ್ಲಿ ಒಬ್ಬರು ಹೇಳಿದ್ದಾರೆ. ಆದರೆ ಈ ಕುರಿತು ರೆಹಮಾನ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಜೈಲಿನಲ್ಲಿನ ಅಕ್ರಮಗಳನ್ನು ಪ್ರಶ್ನಿಸಿದ ರೂಪಾಗೆ ನೋಟೀಸ್