ವೆನಿಜುವೆಲಾ ನಂತರ ಭಾರತದ ಹಾದಿಯಲ್ಲಿ ಮತ್ತೊಂದು ದೇಶ? – News Mirchi

ವೆನಿಜುವೆಲಾ ನಂತರ ಭಾರತದ ಹಾದಿಯಲ್ಲಿ ಮತ್ತೊಂದು ದೇಶ?

ಭಾರತದಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಿದ ನಂತರ ಇತರ ದೇಶಗಳೂ ಭಾರತವನ್ನೇ ಅನುಸರಿಸಲು ಮುಂದಾಗುತ್ತಿವೆ. ಈಗಾಗಲೇ‌ ವೆನಿಜುವೆಲಾ ದೇಶ ಅಲ್ಲ 100 ಬೊಲಿವರ್ ನೋಟು ರದ್ದು ಮಾಡಿದೆ. ಈಗ ಮತ್ತೊಂದು ಅಗ್ರ ದೇಶವೂ ಇದೇ ದಾರಿಯಲ್ಲಿ ಸಾಗುವ ಸಾಧ್ಯತೆಗಳು ಕಾಣಿಸುತ್ತಿವೆ.

100 ಡಾಲರ್ ನೋಟ್ ಅನ್ನು ರದ್ದು ಮಾಡುವ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಸರ್ಕಾರ ಚಿಂತನೆ ನಡೆಸಿದೆ. ಕಪ್ಪು ಹಣವನ್ನು ತಡೆಗಟ್ಟಲು 100 ಡಾಲರ್ ನೋಟು, ಇತರ ನಗದು ಪಾವತಿಗಳನ್ನು ಪರಿಶೀಲಿಸುತ್ತಿದ್ದಾರೆ.ಉಂದಿನ ಸೋಮವಾರ ಸರ್ಕಾರ ಈ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ. ಬ್ಲಾಕ್ ಮನಿ ಟಾಸ್ಕ್‌ಫೋರ್ಸ್ ಒಂದನ್ನು ಸರ್ಕಾರ ನೇಮಕ ಮಾಡುತ್ತಿದೆ.

ಆಷ್ಟ್ರೇಲಿಯಾದಲ್ಲಿ ಕಪ್ಪು ಹಣ ಅಲ್ಲಿನ ಒಟ್ಟು ಜಿಡಿಪಿಯಲ್ಲಿ ಶೇ.1.5 ರಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಇದು ದೇಶಕ್ಕೆ ನಷ್ಟವುಂಟು ಮಾಡುವುದರೊಂದಿಗೆ, ಪ್ರಾಮಾಣಿಕವಾಗಿ ಸಂಪಾದನೆ ಮಾಡಿ, ಅದಕ್ಕೆ ತೆರಿಗೆ ಪಾವತಿಸುವವರಿಗೂ ನಷ್ಟ ಉಂಟುಮಾಡುತ್ತದೆ ಎಂದು ಹೇಳುತ್ತಿದ್ದಾರೆ.

ಸದ್ಯ ಅಲ್ಲಿ 30 ಕೋಟಿಯಷ್ಟು 100 ಡಾಲರ್ ನೋಟುಗಳು ಅಷ್ಟ್ರೆಲಿಯಾದಲ್ಲಿ ಚಲಾವಣೆಯಲ್ಲಿವೆ. ಒಟ್ಟು ಚಲಾವಣೆಯಲ್ಲಿರುವ ಕರೆನ್ಸಿಯಲ್ಲಿ ಶೇ. 92 ರಷ್ಟು 50, 100 ನೋಟುಗಳಿವೆ. ಆದರೆ ಭಾರತದಲ್ಲಿ ಮಾಡಿತೆ ಮಾತ್ರ ಅಲ್ಲಿ ಏಕಾಏಕಿ ರದ್ದು ಘೋಷಣೆ ಮಾಡದಿರಬಹುದು. ಭಾರತದಲ್ಲಿ ಪ್ರಧಾನಿ ಮೋದಿ ಕೊನೆ ಕ್ಷಣದವರೆಗೂ ಯಾರಿಗೂ ತಿಳಿಯದಂತೆ ರಹಸ್ಯವಾಗಿಟ್ಟು ನೇರವಾಗಿ ಪ್ರಕಟಿಸಿದರು. ಅಷ್ಟ್ರೇಲಿಯಾ ಸರ್ಕಾರ ಈಗಾಗಲೇ ನೋಟು ರದ್ದು ಕುರಿತು ಸೂಚನೆ ನೀಡಿಬಿಟ್ಟಿದೆ. ವೆನಿಜುವೆಲಾ ಸಹ ಈಗಾಗಲೇ ಆ ದೇಶದ ದೊಡ್ಡ ನೋಟು ರದ್ದು ಮಾಡುತ್ತಿರುವುದಾಗಿ ಘೋಷಿಸಿದೆ.

Loading...

Leave a Reply

Your email address will not be published.