ಮೂರನೇ ಟೆಸ್ಟ್ ಪಂದ್ಯ, ಒತ್ತಡದಲ್ಲಿ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರ ಚೇತೇಶ್ವರ್ ಪೂಜಾರಾ ಡಬಲ್ ಸೆಂಚುರಿ ಸಿಡಿಸಿದ್ದಾರೆ. 130 ರನ್ ಗಳ ಓವರ್ ನೈಟ್ ಸ್ಕೋರ್ ನೊಂದಿಗೆ ನಾಲ್ಕನೇ ದಿನ ಇನ್ನಿಂಗ್ಸ್ ಆರಂಭಿಸಿದ ಪೂಜಾರಾ, 521 ಎಸೆಗಳಲ್ಲಿ 21 ಬೌಂಡರಿಗಳ ನೆರವಿನಿಂದ ದ್ವಿಶತಕ ಸಿಡಿಸಿದರು. ಟೆಸ್ಟ್‌ ಪಂದ್ಯಗಳಲ್ಲಿ ಪೂಜಾರಿಗೆ ಇದು ಮೂರನೇ ದ್ವಿಶತಕ. ಮತ್ತೊಂದು ಕಡೆ ವೃದ್ಧಿಮಾನ್ ಸಾಹಾ ಶತಕ ಬಾರಿಸಿದ್ದಾರೆ. ಇವರ ನೆರವಿನಿಂದ ಭಾರತ 603 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು ಟೀಮ್ ಇಂಡಿಯಾ.

ಒಟ್ಟಿನಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 451 ರನ್ ಗಳಿಸಿದ ಆಸ್ಟ್ರೇಲಿಯಾಗೆ ಸೂಕ್ತ ಉತ್ತರ ನೀಡಿದೆ ಭಾರತ. 153 ರನ್ ಗಳ ಮುನ್ನಡೆ ಹೊಂದಿರುವ ಭಾರತ ತಂಡ ಉತ್ತಮ ಸ್ಥಿತಿಯಲ್ಲಿದೆ.