ಸಲಿಂಗಿ ಮದುವೆಯನ್ನು ಕಾನೂನು ಬದ್ಧಗೊಳಿಸಿದ ಆಸ್ಟ್ರಿಯಾ ಸರ್ಕಾರ – News Mirchi

ಸಲಿಂಗಿ ಮದುವೆಯನ್ನು ಕಾನೂನು ಬದ್ಧಗೊಳಿಸಿದ ಆಸ್ಟ್ರಿಯಾ ಸರ್ಕಾರ

ಸಲಿಂಗಿ ಜೋಡಿಗಳಿಗೆ 2019 ರ ಆರಂಭದಿಂದ ಮದುವೆಯಾಗಲು ಅವಕಾಶ ಮಾಡಿಕೊಡುವುದಾಗಿ ಆಸ್ಟ್ರಿಯಾದ ಸಾಂವಿಧಾನಿಕ ನ್ಯಾಯಾಲಯವು ಹೇಳಿದೆ. ಇದರಿಂದಾಗಿ ಸಲಿಂಗಿಗಳ ಮದುವೆಗೆ ಅವಕಾಶ ನೀಡುವ ಹನ್ನೆರಡಕ್ಕೂ ಹೆಚ್ಚಿನ ಯೂರೋಪ್ ದೇಶಗಳ ಸಾಲಿಗೆ ಇದೂ ಸೇರಿದಂತಾಗಿದೆ.

ವಿವಾಹದ ಕಾಯ್ದೆಯಲ್ಲಿರುವ ‘ವಿಭಿನ್ನ ಲಿಂಗದ ಇಬ್ಬರು ವ್ಯಕ್ತಿಗಳು’ ಎಂಬ ಪದಗಳನ್ನು 2018ರ ಅಂತ್ಯದ ವೇಳೆಗೆ ತೆಗೆದು ಹಾಕಲಾಗುವುದು ಎಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ. 2019 ರ ಆರಂಭದಿಂದ ಸಲಿಂಗಿಗಳು ಮದುವೆಯಾಗಲು ಅವಕಾಶವಿರುತ್ತದೆ ಎಂದು ಹೇಳಿದೆ. ಸುಮಾರು 8.7 ದಶಲಕ್ಷ ಸಲಿಂಗಿಗಳಿಗೆ ಆಸ್ಟ್ರಿಯಾದಲ್ಲಿ 2010 ರಿಂದ ಒಟ್ಟಿಗೆ ಜೀವಿಸಲು ಅವಕಾಶವಿತ್ತಾದರೂ, ಮದುವೆಯಾಗಲು ಮಾತ್ರ ಅವಕಾಶವಿರಲಿಲ್ಲ.

ಹನಿಪ್ರೀತ್ ಬಳಿ ವಕೀಲರಿಗೆ ಕೊಡಲೂ ದುಡ್ಡಿಲ್ವಂತೆ

ಈಗಾಗಲೇ ಒಟ್ಟಿಗೆ ಜೀವಿಸುತ್ತಿರುವ ಇಬ್ಬರು ಮಹಿಳೆಯರು ತಾವು ಔಪಚಾರಿಕವಾಗಿ ಮದುವೆಯಾಗಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.

ಕಾನೂನು ಬದಲಾದರೂ ಸಲಿಂಗಿಗಳು ಒಟ್ಟಿಗೆ ಜೀವಿಸಬಹುದಾದ ಆಯ್ಕೆ ಮುಂದುವರೆಯುತ್ತದೆ ಎಂದು ಅಲ್ಲಿನ ನ್ಯಾಯಾಲಯ ಹೇಳಿದೆ. ಮದುವೆ ಮತ್ತು ಖಾಸಗಿ ಸಂಬಂಧಗಳು ಇತ್ತೀಚೆಗೆ ಸಾಮಾನ್ಯ ವಿಷಯವಾಗುತ್ತಿದ್ದು, ಸಲಿಂಗಿಗಳು ಮಕ್ಕಳನ್ನು ದತ್ತು ಪಡೆಯಬಹುದು ಎಂದು ಸಲಹೆ ನೀಡಿದೆ.

Get Latest updates on WhatsApp. Send ‘Subscribe’ to 8550851559

Loading...