ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಕಾಗೆ ನಿಷೇಧ ವಿಧಿಸಿದ ಆಸ್ಟ್ರಿಯಾ – News Mirchi

ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಕಾಗೆ ನಿಷೇಧ ವಿಧಿಸಿದ ಆಸ್ಟ್ರಿಯಾ

ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣ ಮುಖ ಮುಚ್ಚುವಂತ ಬುರ್ಕಾ ಅಥವಾ ನಿಕಾಬ್ ಮುಂತಾದ ಮುಸುಕುಗಳನ್ನು ಧರಿಸುವುದನ್ನು ನಿಷೇಧಿಸುವ ಕಾನೂನನ್ನು ಆಸ್ಟ್ರಿಯಾ ಸರ್ಕಾರ ಭಾನುವಾರ ಜಾರಿಗೊಳಿಸಿದೆ. ಈ ಕಾನೂನು ವೈದ್ಯಕೀಯ ಫೇಸ್ ಮಾಸ್ಕ್ ಮತ್ತು ಪಾರ್ಟಿ ಮಾಸ್ಕ್ ಗಳನ್ನೂ ಸಾರ್ವಜನಿಕವಾಗಿ ಬಳಸುವುದನ್ನು ನಿರ್ಬಂಧಿಸುತ್ತದೆ,

ಆಸ್ಟ್ರಿಯಾದ ಮೌಲ್ಯಗಳನ್ನು ಗೌರವಿಸಿ, ಗಲ್ಲದಿಂದ ಕೂದಲಿನವರೆಗೆ ಸಂಪೂರ್ಣ ಮುಖ ಕಾಣುವಂತಿರಬೇಕು ಎಂದು ಆಸ್ಟ್ರಿಯಾ ಸರ್ಕಾರ ಹೇಳಿದೆ ಎಂದು ಬಿಬಿಸಿ ವರದಿ ಮಾಡಿದೆ.

ಆದರೆ ಸರ್ಕಾರದ ಈ ನಡೆಯನ್ನು ಮುಸ್ಲಿಂ ಸಂಘಟನೆಗಳು ಖಂಡಿಸಿವೆ. ಆಸ್ಟ್ರಿಯಾದಲ್ಲಿ ಕೆಲವೇ ಕೆಲವು ಮುಸ್ಲಿಮರು ಮಾತ್ರ ಸಂಪೂರ್ಣ ಮುಖ ಮುಚ್ಚುವಂತಹ ಬುರ್ಕಾಗಳನ್ನು ಧರಿಸುತ್ತಾರೆ ಎಂದು ಮುಸ್ಲಿಂ ಸಂಘಟನೆಗಳು ಹೇಳುತ್ತಿವೆ.

ಸರ್ಕಾರದ ಈ ನಿಯಮವನ್ನು ಉಲ್ಲಂಘಿಸಿ ಮುಖ ಮುಚ್ಚುವಂತ ಬುರ್ಕಾ ಧರಿಸುವವರಿಗೆ 150 ಯುರೋಗಳಷ್ಟು (ಸುಮಾರು ರೂ.11,550) ದಂಡವನ್ನು ಹಾಕಲಾಗುತ್ತದೆ, ಅಷ್ಟೇ ಅಲ್ಲದೆ ಕಾನೂನನ್ನು ಉಲ್ಲಂಘಿಸಿ ಮುಖ ತೋರಿಸಲು ವಿರೋಧಿಸಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ.

ಯುರೋಪಿನಲ್ಲಿ ಬುರ್ಕಾ ನಿಷೇಧ

ಯುರೋಪಿನ ಹಲವು ಪ್ರಮುಖ ರಾಷ್ಟ್ರಗಳಲ್ಲಿ ಬುರ್ಕಾ ಧರಿಸುವುದು ರಾಜಕೀಯ ವಿಷಯವಾಗಿ ಬದಲಾಗಿದೆ. 2011 ರಲ್ಲಿ ಬುರ್ಕಾವನ್ನು ನಿಷೇಧಿಸಿದ ಫ್ರಾನ್ಸ್, ಬುರ್ಕಾ ನಿಷೇಧಿಸಿದ ಮೊದಲ ಯೂರೋಪ್ ದೇಶವೆನಿಸಿಕೊಂಡಿದೆ. ಅದರ ಬೆನ್ನಲ್ಲೇ ಅದೇ ವರ್ಷ ಬೆಲ್ಜಿಯಂ ಬುರ್ಕಾಗೆ ನಿಷೇಧ ವಿಧಿಸಿತು.

[ಇದನ್ನೂ ಓದಿ: ಟಾಯ್ಲೆಟ್ ಕಟ್ಟಿಸದ ಮಾವನ ವಿರುದ್ಧ ದೂರು ನೀಡಿದ ಮಹಿಳೆ!]

ಇನ್ನು ನೆದರ್ಲೆಂಡ್ ನಲ್ಲಿ ಆಸ್ಪತ್ರೆ, ಶಾಲೆ ಮುಂತಾದ ಪ್ರದೇಶಗಳಲ್ಲಿ ಬುರ್ಕಾಗೆ ಭಾಗಶಃ ನಿಷೇಧ ಹೇರಿದೆ. ಜರ್ಮನಿಯಲ್ಲಿ ಸಂಪೂರ್ಣ ಮುಖ ಮುಚ್ಚುವಂತ ಬುರ್ಕಾಗಳನ್ನು ನಿಷೇಧಿಸಬೇಕು ಎಂದು ಜರ್ಮನ್ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಅವರೂ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.

Get Latest updates on WhatsApp. Send ‘Add Me’ to 8550851559

Loading...