ಬೈಕ್ ಆನ್ ಆಗಿದ್ದರೆ ಹೆಡ್ ಲೈಟ್ ಕೂಡಾ ಉರಿಯುತ್ತಿರಬೇಕು |News Mirchi

ಬೈಕ್ ಆನ್ ಆಗಿದ್ದರೆ ಹೆಡ್ ಲೈಟ್ ಕೂಡಾ ಉರಿಯುತ್ತಿರಬೇಕು

ಹಗಲಿನಲ್ಲಿ ವಾಹನಗಳ ಹೆಡ್ ಲೈಟ್ ಆನ್ ಇರುವಂತೆ ಭಾರತ್ ಸ್ಟೇಜ್- 4 ವಾಹನಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಏಪಲ್ 1 ರಿಂದ ಜಾರಿಗೆ ಬಂದ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಎಲ್ಲಾ ಶೋರೂಮ್ ಗಳಲ್ಲೂ ಈ ವಾಹನಗಳ ಮಾರಾಟ ಆರಂಭವಾಗಿದೆ. ಇದುವರೆಗೂ ಇದ್ದ ಭಾರತ್ ಸ್ಟೇಜ್- 3 ವಾಹನಗಳಲ್ಲಿ ಇಂತಹ ನಿಯಮೇನೂ ಇರಲಿಲ್ಲ. ನಮಗಿಷ್ಟ ಬಂದಾಗ ಹೆಡ್ ಲೈಟ್ ಆನ್ ಮಾಡಬಹುದಾಗಿತ್ತು. ಇದೀಗ ಬರುತ್ತಿರುವ ವಾಹನಗಳಲ್ಲಿ ವಾಹನ ಸ್ಟಾರ್ಟ್ ಮಾಡುತ್ತಿದ್ದಂತೆ ಲೈಟ್ ಕೂಡಾ ಆನ್ ಆಗುತ್ತದೆ.

ಹೆಡ್ ಲೈಟ್ ಆನ್ ಇರುವ ವಾಹನ ಎದುರಿಗೆ ಬಂದಾಗ ಉಳಿದ ವಾಹನ ಸವಾರರು ಎದುರು ಬರುತ್ತಿರುವ ವಾಹನಗಳನ್ನು ಸುಲಭವಾಗಿ ಗುರುತಿಸಬಹುದು. ಈ ಮೂಲಕ ಆಗಬಹುದಾದ ಅಪಘಾತಗಳು ಕಡಿಮೆಯಾಗುತ್ತವೆ ಎಂಬುದು ತಜ್ಞರ ಅಭಿಪ್ರಾಯ. ಈಗ ನಮ್ಮ ದೇಶದಲ್ಲಿ ತಯಾರಾಗುವ ವಾಹನಗಳಲ್ಲಿ ಹೆಡ್ ಲೈಟ್ ಗೆ ಬಟನ್ ಇರುವುದಿಲ್ಲ, ವಾಹನ ಸ್ಟಾರ್ಟ್ ಮಾಡಿದರೆ ಸಾಕು ಹಗಲು ರಾತ್ರಿ ಎಂಬ ವ್ಯತ್ಯಾಸವಿಲ್ಲದೆ ಲೈಟ್ ಉರಿಯುತ್ತಲೇ ಇರುತ್ತದೆ. ವಿಶ್ವಾದ್ಯಂತ ಅಪಘಾತಗಳಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಲವು ದೇಶಗಳು ಈ ನಿಯವನ್ನು ಜಾರಿಗೆ ತಂದಿವೆ. ಯೂರೋಪಿನಲ್ಲಿ 2003 ರಿಂದಲೇ ಈ ನಿಯಮ ಜಾರಿಯಲ್ಲಿದೆ. ಇದರಿಂದ ಅಲ್ಲಿ ಉತ್ತಮ ಫಲಿತಾಂಶ ಕಂಡುಬಂದಿದೆ. ಹೀಗಾಗಿ ನಮ್ಮ ದೇಶದಲ್ಲಿಯೂ ಈ ನಿಯಮ ಜಾರಿಗೆ ತರಲು ತೀರ್ಮಾನಿಸಲಾಯಿತು.

ಭಾರತ್ ಸ್ಟೇಜ್-4 ವಾಹನಗಳನ್ನು ತಯಾರಿಸುವಾಗ ಹೆಡ್ ಲೈಟ್ ನಿಯಮವನ್ನೂ ಪಾಲಿಸುವಂತೆ ತಯಾರಕರಿಗೆ ಕೇಂದ್ರ ಆದೇಶಿಸಿತ್ತು. 8 ವರ್ಷಗಳ ಹಿಂದೆಯೇ ಬಿಎಸ್-4 ಕಾರುಗಳ ಮಾರಾಟ ಆರಂಭವಾದರೂ, ಈಗ ದ್ವಿಚಕ್ರ ವಾಹನಗಳಲ್ಲೂ ಈ ನಿಯಮ ಪಾಲಿಸುವಂತೆ ಸರ್ಕಾರ ಸೂಚಿಸಿದೆ.

Loading...
loading...
error: Content is protected !!