ಅವಸ್ಥೆ |News Mirchi

ಅವಸ್ಥೆ

ಅಲ್ಲೊಂದು ಹುಲ್ಲುಗಾವಲು, ಹುಲ್ಲುಗಾವಲಿನ ಅಂಚಲ್ಲೊಂದು ಕಡೆ  ಒಂದು ಸುಂದರ ಜಿಂಕೆ ಮರಿಯೊಂದು ಜಗತ್ತನ್ನೇ ಮರೆತು ಸ್ವಚ್ಛಂದವಾಗಿ ಅಡ್ಡಾಡುತ್ತಾ ಹುಲ್ಲನ್ನು ಪ್ರತಿದಿನವು ಮೇಯುತ್ತಿತ್ತು.

ಪ್ರತಿದಿನವು ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದ ಜಿಂಕೆ ಮರಿಯನ್ನು ದೊರದ ಪೊದೆಯಲ್ಲಿ ಕುಳಿತು ನಾಲಿಗೆಯಲ್ಲಿ ಜೊಲ್ಲು ಸುರಿಸುತ್ತಾ ಹೇಗಾದರೂ ಮಾಡಿ ಈ ಮರಿಯನ್ನು ತಾನು ಮೇಯ್ಯ್ದು ತನ್ನ ಹೊಟ್ಟೆಗೆ ತುಂಬಿಸಿಕೊಳ್ಳುವ ದುರಾಲೋಚನೆಯಲ್ಲಿ ತೋಳವೊಂದು ಹೊಂಚುಹಾಕುತ್ತಿತ್ತು. ಕಡೆಗೊಂದು ದಿನ ಜಿಂಕೆಯನ್ನು ಆ ತೋಳ ಹಿಡಿದೇ ಬಿಟ್ಟಿತು ಆಗ ತೊಳವು…

ಇದು ನನ್ನ ಜಾಗ, ನನ್ನ ಅನುಮತಿಯಿಲ್ಲದೆ ದಿನವೂ ಹೇಗೆ ಇಲ್ಲಿ ಮೇಯುತ್ತೀಯಾ..ಹಾಗಾಗಿ ನೀನು ನನಗೆ ದಂಡ ಕೊಡಬೇಕು”.

“ನಾನು ಹುಟ್ಟಿನಿಂದಲೇ ಈ ಜಾಗದಲ್ಲಿ ಮೇಯುತ್ತಿದ್ದೇನೆ..ಇದು ನನ್ನ ಜಾಗ ನಾನೇಕೆ ಕೊಡಬೇಕು ದಂಡ” ಎಂದು  ಮರಿ ಜಿಂಕೆಯು ಹೇಳಿತು.

ಹೀಗೆ ಮಾತಿಗೆ ಮಾತು ಬೆಳೆಯ ತೊಡಗಿತು. ಕಡೆಗೆ ತೊಳವು “ಒಂದು ಕೆಲಸ ಮಾಡೋಣ. ನಮ್ಮವರು ಬೇಡ, ನಿಮ್ಮವರು ಬೇಡ, ಬೇರೆ ಯಾರಾದರ ಹತ್ತಿರ ನಾವು ನ್ಯಾಯ ಕೇಳೋಣ” ಎಂದಾಗ. ಮುಗ್ದ ಜಿಂಕೆ ಮರಿಯು ಸರಿ ಆಗಲಿ ಎಂದು ತಲೆದೂಗಿತು.

ಇಬ್ಬರೂ ಸೇರಿ ನರಿಯ ಹತ್ತಿರ ನ್ಯಾಯ ಕೇಳಲು ಹೋದರು. ಮುಂದೆ ನ್ಯಾಯ ಯಾರ ಪಾಲಾಯಿತೆಂದು ನೀವೇ ಹೇಳಬೇಕು. ಜಿಂಕೆ ಮರಿಯ ಬಗ್ಗೆ ನಾವೆಲ್ಲರೂ ಹೆಚ್ಚು ಎಂದರೆ ಅಯ್ಯೋ ಅನ್ನಬಹುದು ಹೀಗಾಗ ಬಾರದಾಗಿತ್ತು ಎಂದು ಹೇಳುತ್ತೇವೆ ಹೊರತು ಬೇರೇನೂ ಮಾಡಲಾಗುವುದಿಲ್ಲ ಇದೊಂದು ದುರದಷ್ಟಕರ ಬೆಳವಣಿಗೆ.

ಇಂದಿನ ವಾಸ್ತವದ ಜಗತ್ತು ಇರುವುದೇ ಹೀಗೆ ಎಂದು ಮೂಗು ಮುರಿಯುವ ಬದಲು ಬದಲಾವಣೆಗೆ ನಾವೇಕೆ ಮಣೆ ಹಾಕಬಾರದು. ಈ ಮೇಲಿನ ಕಥೆಯ ಚಿತ್ರಣ ಕೇವಲ ರಾಜಕೀಯ ರಂಗಕ್ಕೆ ಸೀಮಿತವಲ್ಲದೆ, ನಿಮ್ಮ ಜೀವನದ ಹಲವಾರು ಕಡೆಗೆ ಬಂದು ಹೋಗಿರುತ್ತದೆ ಇಲ್ಲವೇ ನೀವೇ ನೇರ ಪಾಲುದಾರಾಗಿರುತ್ತಿರಾ ನಿಮಗೆ ಸಮಯವಿದ್ದರೆ ಒಮ್ಮೆ ತುಲನೆ ಮಾಡಿನೋಡಿ..

-ಮಧುಚಂದ್ರ

Loading...
loading...
error: Content is protected !!