ಅಯೋಧ್ಯೆ: ದೇವಾಲಯ ಪಕ್ಕದಲ್ಲೇ ಮಸೀದಿ

ಫೈಜಾಬಾದ್: ಧೀರ್ಘ ಕಾಲದ ಅಯೋಧ್ಯೆ ವಿವಾದ ಬಗೆಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಹಿಂದೂಗಳು ಮತ್ತು ಮುಸ್ಲಿಮರು ಸೇರಿ ಫೈಜಾಬಾದ್ ಡಿವಿಷನಲ್ ಕಮೀಷನರ್ ರವರಿಗೆ ಒಂದು ಪಿಟೀಷನ್ ಸಲ್ಲಿಸಿದ್ದಾರೆ. ವಿವಾದಿತ ಸ್ಥಳದಲ್ಲಿಯೇ ದೇವಸ್ಥಾನ ಮತ್ತು ಮಸೀದಿ ಎರಡೂ ನಿರ್ಮಿಸುವ ಪ್ರಸ್ತಾವನೆಯನ್ನು ಡಿವಿಷನಲ್ ಕಮೀಷನರ್ ಸೂರ್ಯ ಪ್ರಕಾಶ್ ಮಿಶ್ರಾ ಅವರಿಗೆ ಭಾನುವಾರ ಸಲ್ಲಿಸಿದ್ದಾರೆ.

ಹೈಕೋರ್ಟ್ ಮಾಜಿ ನ್ಯಾಯಾಧೀಶರಾದ ಜಸ್ಟೀಸ್ ಪಲೋಕ್ ಬಸು ಅವರ ಈ ಪ್ರಸ್ತಾವನೆಗೆ ಸುಮಾರು ಹತ್ತು ಸಾವಿರ ಹಿಂದೂ ಮತ್ತು ಮುಸ್ಲಿಮರು ಸಹಿ ಹಾಕಿದ್ದಾರೆ. ತಮಗೆ ಈ ಕುರಿತು ಮನವಿ ಬಂದಿದ್ದು, ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.

ಸದ್ಯ ಅಯೋಧ್ಯೆ ವಿವಾದದ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿರುವುದರಿಂದ ಫೈಜಾಬಾದ್ ವಿಭಾಗೀಯ ಪೀಠ ಕಮೀಷನರ್ ಮೂಲಕ ಚರ್ಚೆ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ, ಶಾಂತಿ ಸೌಹಾರ್ಧತೆಗಳನ್ನು ರಕ್ಷಿಸುತ್ತಾ ಜನರ ಭಾವನೆಗಳನ್ನು ಸುಪ್ರೀಂ ಕೋರ್ಟ್ ಗೌರವಿಸುತ್ತದೆ ಎಂದು ಆಶಿಸುತ್ತಿದ್ದೇವೆ ಎಂದು ಬಸು ಹೇಳಿದರು.