ವಿವಾದಿತ ಸ್ಥಳದಲ್ಲಿಯೇ ರಾಮಮಂದಿರವಾಗಲಿ, ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಮಸೀದಿಯಾಗಲಿ: ಶಿಯಾ ವಕ್ಫ್ ಬೋರ್ಡ್ – News Mirchi

ವಿವಾದಿತ ಸ್ಥಳದಲ್ಲಿಯೇ ರಾಮಮಂದಿರವಾಗಲಿ, ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಮಸೀದಿಯಾಗಲಿ: ಶಿಯಾ ವಕ್ಫ್ ಬೋರ್ಡ್

ಮಹತ್ವದ ಬೆಳವಣಿಗೆಯೊಂದರಲ್ಲಿ ವಿವಾದಿತ ಅಯೋಧ್ಯೆ ಪ್ರದೇಶದಲ್ಲಿಯೇ ರಾಮಮಂದಿರ ನಿರ್ಮಾಣವಾಗಲಿ, ಮಸೀದಿ ಮಾತ್ರ ಅಲ್ಲಿಂದ ಸ್ವಲ್ಪ ದೂರದಲ್ಲಿ ಮುಸ್ಲಿಂ ಬಾಹುಳ್ಯವಿರುವ ಪ್ರದೇಶದ ಸಮೀಪ ನಿರ್ಮಾಣವಾಗಲಿ ಎಂದು ಶಿಯಾ ವಕ್ಫ್ ಬೋರ್ಟ್ ಸುಪ್ರೀಂ ಕೋರ್ಟ್ ಎದುರು ಪ್ರಸ್ತಾವನೆಯಿಟ್ಟಿದೆ. ಮಸೀದಿಯು ಶಿಯಾ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ಶಿಯಾ ಕೇಂದ್ರ ವಕ್ಫ್ ಮಂಡಳಿ ಮಾತ್ರ ಈ ವಿಷಯದಲ್ಲಿ ಮಾತುಕತೆ ನಡೆಸಲು ಅರ್ಹವಾಗಿದೆಯೇ ಹೊರತು ಸುನ್ನಿ ಬೋರ್ಡ್ ಗೆ ಸಂಬಂಧವಿಲ್ಲ ಎಂದು ಹೇಳಿದೆ.

1528 ರಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತಿರುವ ಬಾಬ್ರಿ ಮಸೀದಿಯ ಜಾಗವು ರಾಮನ ಜನ್ಮಭೂಮಿಯಾಗಿದ್ದು, ಅಲ್ಲಿದ್ದ ದೇವಾಲಯದ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂಗಳ ವಾದ. 1984 ರಲ್ಲಿ ಎಲ್.ಕೆ.ಅಡ್ವಾಣಿ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ ರಾಮಜನ್ಮಭೂಮಿ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಅಭಿಯಾನಕ್ಕೆ ಚಾಲನೆ ನೀಡಿತ್ತು. 1992 ಡಿಸೆಂಬರ್ 6 ರಂದು ಕರ ಸೇವಕರು ಮಸೀದಿಯನ್ನು ಕೆಡವಿದ್ದು ಕೋಮು ಗಲಭೆಗೆ ಕಾರಣವಾಗಿತ್ತು.

ಒಡೆಯದು, ನೆನೆಯದು… ಸ್ಯಾಮ್ಸಂಗ್ ನ ಹೊಸ ಸ್ಮಾರ್ಟ್ ಫೋನ್

ಅಯೋಧ್ಯೆ ವಿವಾದವನ್ನು ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಮಾರ್ಚ್ ನಲ್ಲಿ ಸುಪ್ರೀಂ ಕೋರ್ಟ್ ನ ಮೂರು ನ್ಯಾಯಾಧೀಶರ ಪೀಠವು ಸಲಹೆ ನೀಡಿತ್ತು. ಅಗತ್ಯವಿದ್ದಲ್ಲಿ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸಲೂ ಸಿದ್ಧ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಹೇಳಿದ್ದರು. ನಂತರ ಹಲವು ಬಾರಿ ನ್ಯಾಯಾಲಯದ ಹೊರಗೆ ವಿವಾದ ಬಗೆಹರಿಸಿಕೊಳ್ಳಲು ಮಾತುಕತೆಗೆ ಪ್ರಯತ್ನಿಸಲಾಯಿತಾದರೂ ಯಶಸ್ವಿಯಾಗಿರಲಿಲ್ಲ. ಇದೀಗ ಶಿಯಾ ವಕ್ಫ್ ಬೋರ್ಡ್ ಹೊಸ ಪ್ರಸ್ತಾವನೆ ಇಟ್ಟಿರುವುದು ಮಹತ್ವ ಪಡೆದಿದೆ.

Loading...