ಅಜಂಖಾನ್ ಆಪ್ತೆ ಸರೋಜಿನಿ ಅಗರ್ವಾಲ್ ಬಿಜೆಪಿ ಸೇರ್ಪಡೆ – News Mirchi

ಅಜಂಖಾನ್ ಆಪ್ತೆ ಸರೋಜಿನಿ ಅಗರ್ವಾಲ್ ಬಿಜೆಪಿ ಸೇರ್ಪಡೆ

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲುಂಡ ಬಳಿಕ, ಸಮಾಜವಾದಿ ಪಕ್ಷದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಶುಕ್ರವಾರ ಅಜಮ್ ಖಾನ್ ಅವರ ಆಪ್ತೆ, ವಿಧಾನ ಪರಿಷತ್ ಸದಸ್ಯೆ ಸರೋಜಿನಿ ಅಗರ್ವಾಲ್ ಸಮಾಜವಾದಿ ಪಕ್ಷ ತೊರೆದು ಸಚಿವೆ ರೀಟಾ ಬಹುಗುಣ ಮತ್ತು ಸಚಿವ ಮಹೇಂದ್ರ ಸಿಂಗ್ ಅವರ ಸಮಕ್ಷಮದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಪಕ್ಷ ಸೇರ್ಪಡೆ ನಂತರ ಮಾತನಾಡಿದ ಸರೋಜಿನಿ ಅಗರ್ವಾಲ್, ನಾನು 22 ವರ್ಷಗಳಿಂದ ನೇತಾಜಿ (ಮುಲಾಯಂ ಸಿಂಗ್ ಯಾದವ್) ಅವರೊಂದಿಗಿದ್ದೆ. ಆದರೆ ಇತ್ತೀಚೆಗೆ ಪಕ್ಷದಲ್ಲಿ ನನಗೆ ಉಸಿರುಗಟ್ಟಿಸುವ ವಾತಾವರಣವಿದೆ ಎಂದು ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಈಗ ಬಿಜೆಪಿ ಸರ್ಕಾರವಿದ್ದು, ಈಗ ನಾನು ಜನರಿಗೆ ಹೆಚ್ಚಿನ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದು ಆಕೆ ಹೇಳಿದ್ದಾರೆ.

ನಾನು ಬಿಜೆಪಿಯ ಐಟಂ ಗರ್ಲ್ ಎಂದ ಅಜಂಖಾನ್

ಕಳೆದ ವಾರ ಮತ್ತಿಬ್ಬರು ಸಮಾಜವಾದಿ ಪಕ್ಷದ ವಿಧಾನ ಪರಿಷತ್ ಸದಸ್ಯರಾದ ಬುಕ್ಕಲ್ ನವಾಬ್ ಮತ್ತು ಯಶ್ವಂತ್ ಸಿಂಗ್ ಪಕ್ಷ ತೊರೆದು ಕಮಲ ಪಾಳಯಕ್ಕೆ ಹಾರಿದ್ದರು. ಅದಕ್ಕೆ ಅವರು ಕೊಟ್ಟಿದ್ದ ಕಾರಣವೂ ಹೆಚ್ಚು ಕಡಿಮೆ ಇದೇ ಆಗಿತ್ತು. ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.

ಸರೋಜಿನಿ ಅಗರ್ವಾಲ್ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, “ಕಲ್ಲು ಹೊಡಿ, ಒಬ್ಬ ವಿಧಾನ ಪರಿಷತ್ ಸದಸ್ಯನನ್ನು ಕಿತ್ತುಕೋ” ಎಂಬಂತಾಗಿದೆ ಎಂದು ಹೇಳಿದ್ದಾರೆ.

ಕಾರಿಗೆ ಕಲ್ಲು, ಇದು ಬಿಜೆಪಿ, ಆರ್.ಎಸ್.ಎಸ್ ರಾಜಕೀಯದ ಶೈಲಿ ಎಂದ ರಾಹುಲ್

ಸರೋಜಿನಿ ಅಗರ್ವಾಲ್ ಸಮಾಜವಾದಿ ಪಕ್ಷದ ಮುಖಂಡ ಅಜಮ್ ಖಾನ್ ಅವರ ಆಪ್ತರಾಗಿದ್ದು, ಪಕ್ಷದಲ್ಲಿ ಎದುರಾದ ಆಕ್ಷೇಪಗಳ ಹೊರತಾಗಿಯೂ ಸರೋಜಿನಿ ಅಗರ್ವಾಲ್ ಅವರನ್ನು ವಿಧಾನಪರಿಷತ್ ಗೆ ಕಳುಹಿಸಲು ಯಶಸ್ವಿಯಾಗಿದ್ದರು.

Loading...