ದಿಗಂಬರನಾಗಿರುವುದೇ ನನಗಿಷ್ಟ – News Mirchi

ದಿಗಂಬರನಾಗಿರುವುದೇ ನನಗಿಷ್ಟ

ಬೆಂಗಳೂರು: ಸಾಧುಗಳು ಲೋಕೋದ್ಧಾರಕ್ಕಾಗಿ ಕಷ್ಟ ಪಡುತ್ತಾರೆ. ನಾನು ಕೂಡಾ ಅದೇ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಪ್ರಜೆಗಳ ಮುಂದೆ ಸಂಸ್ಕಾರಕ್ಕಾಗಿ ಬಟ್ಟೆ ಧರಿಸುತ್ತಿದ್ದೇನೆ, ಇಲ್ಲವೆಂದರೆ ದಿಗಂಬರನಾಗಿರಲು ನಾನು ಇಷ್ಟಪಡುತ್ತೇನೆ ಎಂದು ಯೋಗಾ ಗುರು ರಾಮದೇವ್ ಹೇಳಿದ್ದಾರೆ.

ಸುತ್ತೂರು ಮಠದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ಮಾತನಾಡಿದರು. ಪ್ರತಿ ದಿನ ಕನಿಷ್ಠ 30 ನಿಮಿಷಗಳ ಕಾಲ ಯೋಗ ಮಾಡುವ ಮೂಲಕ ರೋಗಗಳಿಂದ ದೂರವಿರಬಹುದು ಎಂದು ಹೇಳಿ ಕೆಲ ಯೋಗಾಸನಗಳನ್ನು ಮಾಡಿ ಅವುಗಳ ಉಪಯೋಗಗಳನ್ನು ವಿವರಿಸಿದರು.

Loading...

Leave a Reply

Your email address will not be published.