ಒಲಂಪಿಕ್ಸ್ ಪದಕ ಗೆದ್ದವನನ್ನು ಸೋಲಿಸಿದ ಬಾಬಾ ರಾಮ್ ದೇವ್!

ಯೋಗ ಗುರು ಬಾಬಾ ರಾಮದೇವ್ ತಾವು ಎಸೆದಿದ್ದ ಸವಾಲಿನಲ್ಲಿ ಗೆದ್ದಿ ಭಲೇ ಎನಿಸಿಕೊಂಡಿದ್ದಾರೆ. 2008 ರ ಒಲಂಪಿಕ್ಸ್ ರೆಸ್ಲಿಂಗ್ ನಲ್ಲಿ ಭಾರತದ ಕುಸ್ತಿ ಪಟು ಸುಶೀಲ್ ಕುಮಾರ್ ರವರನ್ನು ಸೋಲಿಸಿದ್ದ ಮತ್ತು ಬೆಳ್ಳಿ ಪದಕ ಗೆದ್ದಿದ್ದ ಚೀನಾದ ಕುಸ್ತಿ ಪಟು ಆಂಡ್ರಿ ಸ್ಟ್ಯಾಡ್ನಿಕ್ ನನ್ನು ತನ್ನೊಂದಿಗೆ ಕುಸ್ತಿ ಮಾಡಿ ಗೆಲ್ಲುವಂತೆ ಬಾಬಾ ರಾಮ್ ದೇವ್ ಸವಾಲ್ ಎಸೆದಿದ್ದರು. ಬುಧವಾರ ರಾತ್ರಿ ಪತಂಜಲಿ ಪವರ್‌ ವೀಟಾ ಪ್ರೋ ರೆಸ್ಲಿಂಗ್ ಲೀಗ್ ನ ಪ್ರಮೋಷನಲ್ ಪಂದ್ಯದಲ್ಲಿ ಆತನ ವಿರುದ್ಧ ಜಯಗಳಿಸಿದರು.

ಈ ಫ್ರೆಂಡ್ಲೀ ಪಂದ್ಯದಲ್ಲಿ ರಾಮ್ ದೇವ್ 12-0 ಅಂಕಗಳಿಂದ ಒಲಂಪಿಕ್ ಆಟಗಾರನನ್ನು ಸೋಲಿಸಿದ್ದಾರೆ. ಎದುರಾಳಿಗೆ ಒಂದು ಅಂಕ ಕೂಡಾ ಬಿಟ್ಟುಕೊಡದಿದ್ದುದು ಗಮನಾರ್ಹ. ರಾಮ್ ದೇವ್ ರನ್ನು ವಿನ್ನರ್ ಎಂದು ಘೋಷಿಸುತ್ತಿದ್ದಂತೆ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎಂಬ ಘೋಷಣೆಗಳು ಕೇಳಿ ಬಂದವು.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache