ಖಾಸಗಿ ಭದ್ರತಾ ಸಂಸ್ಥೆ ಸ್ಥಾಪಿಸಿದ ಬಾಬಾ ರಾಮದೇವ್ – News Mirchi

ಖಾಸಗಿ ಭದ್ರತಾ ಸಂಸ್ಥೆ ಸ್ಥಾಪಿಸಿದ ಬಾಬಾ ರಾಮದೇವ್

ಪತಂಜಲಿ ಆಯುರ್ವೇದ ಉತ್ಪನ್ನಗಳಿಂದ ಎಫ್.ಎಂ.ಸಿ.ಜಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದ ಯೋಗ ಗುರು ಬಾಬಾ ರಾಮದೇವ್, ಇದೀಗ ಒಂದು ಹೊಸ ಖಾಸಗಿ ಸಂಸ್ಥೆಯನ್ನು ಆರಂಭಿಸಿದ್ದಾರೆ. “ಪರಾಕ್ರಮ್ ಸುರಕ್ಷಾ ಪ್ರೈವೇಟ್ ಲಿಮಿಟೆಡ್” ಎಂಬ ಹೆಸರಿನಲ್ಲಿ ಭದ್ರತಾ ಸಂಸ್ಥೆಗೆ ಚಾಲನೆ ನಿಡಿದ್ದಾರೆ.

ತಮ್ಮ ಸೆಕ್ಯೂರಿಟಿ ಸಂಸ್ಥೆಯ ಮೂಲಕ ದೇಶದಲ್ಲಿ 25-50 ಸಾವಿರ ಯುವಕರಿಗೆ ಉದ್ಯೋಗ ಕಲ್ಪಿಸುವುದಾಗಿ ಬಾಬಾ ರಾಮದೇವ್ ಹೇಳಿದ್ದಾರೆ. ಅಷ್ಟೇ ಅಲ್ಲದೇ ಶೀಘ್ರದಲ್ಲಿಯೇ ದೇಶದ ಅತಿ ದೊಡ್ಡ ಭದ್ರತಾ ಸಂಸ್ಥೆಗಳ ಸಾಲಿನಲ್ಲಿ ತಮ್ಮ ಭದ್ರತಾ ಸಂಸ್ಥೆಯೂ ನಿಲ್ಲಲಿದೆ ಎಂದು ಅವರು ಹೇಳಿದ್ದಾರೆ.

ಯೋಗ ನಂತರ ಆಯುರ್ವೇದ ಉತ್ಪನ್ನಗಳ ಮೇಲೆ ರಾಮದೇವ್ ಗಮನ ಹರಿಸಿ, ಪತಂಜಲಿ ಹೆಸರಿನಲ್ಲಿ ಎಫ್.ಎಂ.ಸಿ.ಜಿ ಮಾರುಕಟ್ಟೆಗೂ ಪ್ರವೇಶಿಸಿದ್ದು ನಮಗೆ ತಿಳಿದದ್ದೇ. ಸದ್ಯ ದೇಶದಲ್ಲಿರುವ ಪ್ರತಿಯೊಬ್ಬರ ಆತ್ಮರಕ್ಷಣೆಗಾಗಿ, ದೇಶದ ಭದ್ರತೆಯ ಕೆಲಸಗಳಿಗಾಗಿ ಯುವಕರನ್ನು ಸಿದ್ಧಗೊಳಿಸುವುದೇ ನಮ್ಮ ಗುರಿ ಎಂದು ಬಾಬಾ ರಾಮದೇವ್ ಹೇಳಿದ್ದಾರೆ.

ಶಶಿಕಲಾಗೆ ರಾಜಾತಿಥ್ಯ, ಅಧಿಕಾರಿಗೆ ನೀಡಿದ್ದಾರಂತೆ 2 ಕೋಟಿ ಲಂಚ!

ನೇಮಕ ಮಾಡಿಕೊಂಡ ಯುವಕರಿಗೆ ತರಬೇತಿ ನೀಡಲು ನಿವೃತ್ತ ಸೇನಾಧಿಕಾರಿಗಳು, ಪೊಲೀಸ್ ಅಧಿಕಾರಿಗಳನ್ನು ಅವರು ನೇಮಕ ಮಾಡಿಕೊಳ್ಳಲಿದ್ದಾರಂತೆ. ರಾಮದೇವ್ ಅವರ ಎಫ್.ಎಂ.ಸಿ.ಜಿ ವಹಿವಾಟುಗಳು 2016ರ ವೇಳೆಗೆ ರೂ.1,100 ಕೋಟಿ ಇದ್ದರೆ, ಅದೇ ವರ್ಷದಲ್ಲಿ ಬಾಬಾ ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಆಸ್ತಿ ಮೌಲ್ಯ ರೂ.25,600 ಕೋಟಿಗೆ ಏರಿಕೆಯಾಗಿ ಭಾರತದಲ್ಲೇ 25ನೇ ಶ್ರೀಮಂತರಾಗಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆ: ಗಾಂಧಿ ಮೊಮ್ಮನಿಗೆ ನಿತೀಶ್ ಬೆಂಬಲ

Loading...