ವಿಮಾನದಲ್ಲಿ ಜನಿಸಿದ ಮಗು, ಜೆಟ್ ಏರ್ ವೇಸ್ ನಿಂದ ಬಂಪರ್ ಆಫರ್

35 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದಲ್ಲಿಯೇ ಮಹಿಳೆಯೊಬ್ಬರು ಭಾನುವಾರ ಮಗುವಿಗೆ ಜನ್ಮ ನೀಡಿದ್ದರು. ಈಗ ವಿಮಾನದಲ್ಲಿ ಹುಟ್ಟಿದ ಆ ಮಗು ಒಂದು ಬಂಪರ್ ಕೊಡುಗೆ ಪಡೆಯಲಿದೆ. ತಮ್ಮ ವಿಮಾನದಲ್ಲಿ ಹುಟ್ಟಿದ ಆ ಮಗುವಿಗೆ ಜೀವನ ಪೂರ್ತಿ ಉಚಿತ ಟಿಕೆಟ್ ನೀಡಬೇಕೆಂದು ಜೆಟ್ ಏರ್ ವೇಸ್ ತೀರ್ಮಾನಿಸಿದೆ. ಜೆಟ್ ಏರ್ ವೇಸ್ ನ 9ಡಬ್ಲ್ಯೂ569 ವಿಮಾನ ಭಾನುವಾರ ಮುಂಜಾನೆ ಸೌದಿ ಅರೇಬಿಯಾದಲ್ಲಿನ ಡಮ್ಮಮ್ ನಿಂದ ಕೇರಳದ ಕೊಚ್ಚಿಗೆ ಹೊರಟಿತ್ತು.

ಪ್ರಯಾಣದ ನಡುವೆ ಗರ್ಭಿಣಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಶುರುವಾಗಿತ್ತು. 162 ಜನ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಯಾರಾದರೂ ವೈದ್ಯರಿದ್ದರೆ ನೆರವಿಗೆ ಬರುವಂತೆ ವಿಮಾನದಲ್ಲಿನ ಸಿಬ್ಬಂದಿ ಮನವಿ ಮಾಡಿದರು. ಆದರೆ ಕೇರಳಕ್ಕೆ ಹೊರಟಿದ್ದ ನರ್ಸ್ ಒಬ್ಬರಿದ್ದು, ಅವರು ನೆರವಿಗೆ ಬಂದರು. ನಂತರ ತುರ್ತು ವೈದ್ಯಕೀಯ ಪರಿಸ್ಥಿತಿ ಘೋಷಿಸಿ, ವಿಮಾನವನ್ನು ಮುಂಬೈಗೆ ತಿರುಗಿಸಿದರು. ವಿಮಾನದಲ್ಲಿಯೇ ನರ್ಸ್ ಮತ್ತು ವಿಮಾನ ಸಿಬ್ಬಂದಿಯ ನೆರವಿನಿಂದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದಳು. ಹೀಗೆ ವಿಮಾನದಲ್ಲಿ ಮಕ್ಕಳು ಹುಟ್ಟುವುದು ಜೆಟ್ ಏರ್ ವೇಸ್ ಸಂಸ್ಥೆಗೆ ಇದೇ ಮೊದಲು. ಹೀಗಾಗಿ ಆ ಮಗುವಿಗೆ ತಮ್ಮ ವಿಮಾನದಲ್ಲಿ ಜೀವನ ಪೂರ್ತಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಕಲ್ಪಿಸುತ್ತಾ “ಲೈಫ್ ಟೈಮ್ ಪಾಸ್” ನೀಡುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Loading...
error: Content is protected !!