ಡ್ರಗ್ಸ್ ಮತ್ತಿನಲ್ಲಿ ದಂಪತಿ ಸಾವು, ತಿಂಡಿಯಿಲ್ಲದೆ ಮಗು ಕೂಡಾ… – News Mirchi
We are updating the website...

ಡ್ರಗ್ಸ್ ಮತ್ತಿನಲ್ಲಿ ದಂಪತಿ ಸಾವು, ತಿಂಡಿಯಿಲ್ಲದೆ ಮಗು ಕೂಡಾ…

ಮಿತಿ ಮೀರಿ ಡ್ರಗ್ ಸೇವಿಸಿದ ಕಾರಣ ಯುವ ದಂಪತಿಗಳು ಸಾವನ್ನಪ್ಪಿದ್ದು, ನಾಲ್ಕು ದಿನಗಳ ನಂತರ ಆಹಾರವಿಲ್ಲದೆ ಅವರ ಪುಟ್ಟ ಮಗು ಸಾವನ್ನಪ್ಪಿದ ಮನಕಲಕುವ ಘಟನೆ ಅಮೆರಿಕದಲ್ಲಿ ನಡೆದಿದೆ. ಐದು ತಿಂಗಳ ಸಮ್ಮರ್ ಚೇಂಬರ್ಸ್ ಎಂಬ ಹೆಣ್ಣು ಮಗು ಡಿಹೈಡ್ರೇಷನ್, ತಿಂಡಿಯಿಲ್ಲದೆ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಜಾಸನ್ ಚೇಂಬರ್ಸ್(27), ಚೆಲ್ಸಿಯಾ ಕಾರ್ಡಾರೋ(19) ಹಾಗೂ ಮಗುವಿನ ಮೃತದೇಹಗಳು ಪಿಟ್ಸ್ ಬರ್ಗ್ ನಗರಕ್ಕೆ 60 ಕಿ.ಮೀ ದೂರದ ಜಾನ್ಸ್‌ಟೌನ್ ಸಮೀಪ ಇರುವ ಮನೆಯಲ್ಲಿ ಪತ್ತೆಯಾಗಿವೆ.

ಮೃತರ ಮನೆಯಲ್ಲಿ ಡ್ರಗ್ಸ್ ಪತ್ತೆಯಾಗಿದ್ದು, ದಂಪತಿಗಳಿಬ್ಬರೂ ಭಾರೀ ಪ್ರಮಾಣದಲ್ಲಿ ಹೆರಾಯಿನ್ ಸೇವಿಸಿದ ಕಾರಣ, ಕೆಲ ನಿಮಿಷಗಳ ಅಂತರದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅವರು ಸಾವನ್ನಪ್ಪಿ ಒಂದು ವಾರವಾಗಿತ್ತು. ಚೇಂಬರ್ಸ್ ಮೊದಲ ಮಹಡಿಯಲ್ಲಿ ಸಾವನ್ನಪ್ಪಿದ್ದರೆ, ಕಾರ್ಡಾರೋ ಎರಡನೇ ಮಹಡಿಯಲ್ಲಿನ ಬಾತ್ ರೂಮಿನಲ್ಲಿ ಶವವಾಗಿ ಬಿದ್ದಿದ್ದಳು. ಅವರ ಮಗಳ ಮೃತದೇಹ ಎರಡನೇ ಮಹಡಿಯ ಮಲಗುವ ಕೋಣೆಯಲ್ಲಿ ಪತ್ತೆಯಾಗಿದೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!