Koti Shivanama Japayagna

ಬಡಗವಾರಹಳ್ಳಿಯಲ್ಲಿ ಭಕ್ತಿ ಭಾವಾವೇಶ ಮೇಳೈಸಿದ ಕೋಟಿ ಶಿವನಾಮ ಜಪಯಜ್ಞ

ಚಿಂತಾಮಣಿ, ಫೆ.15: ತಾಲ್ಲೂಕು ಕಸಬಾ ಹೋಬಳಿ ಕಾಗತಿ ಗ್ರಾಮ ಪಂಚಾಯಿತಿಯ ಬಡಗವಾರಹಳ್ಳಿ ಮುನೇಶ್ವರಸ್ವಾಮಿ ದೇವಾಲಯದಲ್ಲಿ ಸತತ ಹತ್ತನೇ ವರ್ಷ ಕೋಟಿ ಶಿವನಾಮ ಜಪಯಜ್ಞ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವೇದಾಂತಿ ಧನಮಿಟ್ಟೇನಹಳ್ಳಿ ಬೋಧಾನಂದ ಸೀತಾರ್ಯ ಸ್ವಾಮೀಜಿರವರು, ಭಾರತೀಯ ಸಂಸ್ಕತಿ ನಶಿಸುತ್ತಿರುವ ಕಾಲ ಘಟ್ಟದಲ್ಲಿ ಇಂತಹ ಧಾರ್ಮಿಕ ಕಾರ್ಯಗಳು ಮಕ್ಕಳಲ್ಲಿ ಭಕ್ತಿ ಭಾವನೆಗಳನ್ನು ವೃದ್ಧಿಯಾಗಿಸಲು ಸಹಕಾರಿಯಾಗುತ್ವೆ ಎಂದು ಅಭಿಪ್ರಾಯಪಟ್ಟರು.

ಹೊಟ್ಟೆಗೆ ಒದ್ದ ಸಿಪಿಎಂ ನಾಯಕ, ಮಹಿಳೆಗೆ ಗರ್ಭಪಾತ

ಹಿರಿಯ ತತ್ವಪದಗಾರರಾದ ಶಂಕರರೆಡ್ಡಿರವರು ಶಿವನಾಮ ಜಪಿಸುತ್ತಾ ಹೆಜ್ಜೆ ಹಾಕಿ ಯಜ್ಞಕ್ಕೆ ಚಾಲನೆ ನೀಡಿದರು. ದೇವಾಲಯದಂಗಳದಲ್ಲಿ ತೆಂಗಿನ ಗರಿ, ಹೊಂಗೆ ಸೊಪ್ಪುಗಳ ದೀಪಾಲಂಕೃತ ವಿಶೇಷ ಚಪ್ಪರದಡಿಯಲ್ಲಿ ಶಿವಪಾರ್ವತಿಯರ ಭಾವಚಿತ್ರದ ಅಲಂಕಾರದೊಂದಿಗೆ ಶಿವನಾಮಕ್ಕೆ ಹೆಜ್ಜೆ ಹಾಕುತ್ತಿದ್ದ ಹಿರಿಯರೊಂದಿಗೆ ಮಕ್ಕಳೂ ಸಹ ಲಯಬದ್ಧವಾಗಿ ಕೋಲಾಟದೊಂದಿಗೆ ಪ್ರದಕ್ಷಿಣೆ ಹಾಕುತ್ತಾ ಭಕ್ತಿಯ ಪರಾಕಾಷ್ಠೆಯಲ್ಲಿ ತೇಲುತ್ತಿದ್ದರು.

ದೇಗುಲದಲ್ಲಿ ದೇವರಿಗೆ ಕಣ್ಮನ ಸೆಳೆಯುವ ಅಲಂಕಾರ, ಪೂಜೆಗಳಾದರೆ, ತಂಡಗಳಲ್ಲಿ ಬರುತ್ತಿದ್ದ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನೊಂದಿಗೆ ಪ್ರಸಾದ ವಿನಿಯೋಗ ವ್ಯವಸ್ಥೆಯಾಗಿತ್ತು.

ಓವೈಸಿ ಹೇಳಿಕೆಗೆ ಸೇನೆಯ ಖಡಕ್ ಉತ್ತರ

ಕಾರ್ಯಕ್ರಮದಲ್ಲಿ ಧರ್ಮದರ್ಶಿ ಕಾಗತಿ ವಿ.ವೆಂಕಟರತ್ನಂ, ವಕೀಲ ಶ್ರೀನಿವಾಸನ್, ಸುರೇಶ್‍ಬಾಬು, ಬಡಗವಾರಹಳ್ಳಿ ಗ್ರಾಮದ ಪಟೇಲ್ ಮುನಿರೆಡ್ಡಿ, ಶ್ರೀನಿವಾಸರೆಡ್ಡಿ, ಕಾಗತಿ ಗ್ರಾಮದ ಅಶ್ವತ್ಥನಾರಾಯಣಪ್ಪ, ರಾಮಚಂದ್ರಪ್ಪ, ಮುನಿಯಪ್ಪ, ಮುನಿನಾರಾಯಣಪ್ಪ, ಗಜೇಂದ್ರ, ಬೆಂಗಳೂರಿನ ಚೌಡಮ್ಮ ಮತ್ತು ಸಂಗಡಿಗರು ಮುಂತಾದವರು ಉಪಸ್ಥಿತರಿದ್ದು, ಜಪಯಜ್ಞ ಅಹೋರಾತ್ರಿ ನಡೆಯಿತು.

Get Latest updates on WhatsApp. Send ‘Subscribe’ to 8550851559