ಬಾಗೇಪಲ್ಲಿ: ರಸ್ತೆ ಮಧ್ಯೆ ತೆರೆದ ಮ್ಯಾನ್ ಹೋಲ್, ವಾಹನ ಸವಾರರಿಗೆ ಪ್ರಾಣ ಸಂಕಟ

ಬಾಗೇಪಲ್ಲಿ, ಫೆ.14:  ಪಟ್ಟಣದ ಗೂಳೂರು ರಸ್ತೆಯ ಸ್ಪಂದನ ಅಸ್ಪತ್ರೆ ಹತ್ತಿರ ರಸ್ತೆಯ ಮಧ್ಯಭಾಗದಲ್ಲಿ ಒಳಚರಂಡಿ ಗುಂಡಿ ಮುರಿದಿರುವರಿಂದ ದ್ವಿಚಕ್ರವಾಹನ ಸವಾರರು ಪ್ರಾಣವನ್ನು ಮುಷ್ಟಿಯಲ್ಲಿಟ್ಟುಕೊಂಡು ಸಂಚರಿಸುವಂತಾಗಿದ್ದು, ಮ್ಯಾನ್ ಹೋಲ್ ದುರಸ್ತಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಲವು ಘಟನೆಗಳು

ರಸ್ತೆ ಮದ್ಯೆ ಮ್ಯಾನ್ ಹೋಲ್ ನ ಮುಚ್ಚಳ ಮುರಿದು ಬಿದ್ದ ಕಾರಣ ವಾಹನ ಸವಾರರು ಈ ಸ್ಥಳದಲ್ಲಿ ಹಲವು ಬಾರಿ ಬಿದ್ದಿರುವ ಘಟನೆಗಳು ಹಲವಾರು ಇವೆ ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ

ಮುರಿದ ಮ್ಯಾನ್ ಹೋಲ್‌ನಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆಂದು ಸಾರ್ವಜನಿಕರು ಅಧಿಕಾರಿಗಳಿಗೆ ಇಡಿ ಶಾಪಹಾಕುತ್ತಿದ್ದಾರೆ.

ಹಲವು ಬಾರಿ ಮ್ಯಾನ್ ಹೋಲ್ ದುರಸ್ಥಿ ಮಾಡುವಂತೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರೂ ಇತ್ತ ಗಮನ ಹರಿಸಿಲ್ಲ. ಇನ್ನಾದರು ಅಧಿಕಾರಿಗಳು ಇತ್ತ ಗಮನ ಹರಿಸಿ ಸರಿಪಡಿಸುವರೇ?

Get Latest updates on WhatsApp. Send ‘Subscribe’ to 8550851559