ಬಜಾಜ್, ಕವಾಸಕಿ 8 ವರ್ಷಗಳ ಸಂಬಂಧಕ್ಕೆ ತಿಲಾಂಜಲಿ

ಕವಾಸಕಿ ಮತ್ತು ಬಜಾಜ್ ತಮ್ಮ 8 ವರ್ಷಗಳ ಸಂಬಂಧಕ್ಕೆ ತಿಲಾಂಜಲಿ ಹಾಡುತ್ತಿವೆ. ಸೇಲ್ಸ್, ಮಾರ್ಕೆಟಿಂಗ್ ಮೈತ್ರಿಯಲ್ಲಿ ಏಳು ವರ್ಷಗಳಿಂದ ಸೇವೆ ನೀಡುತ್ತಿದ್ದ ಕವಾಸಕಿ, ಬಜಾಜ್ ಗಳ ಸಂಬಂಧಕ್ಕೆ ಏಪ್ರಿಲ್ 1, 2017 ರಂದು ಕೊನೆ ಹಾಡಬೇಕೆಂದು ಮಹತ್ವದ ತೀರ್ಮಾನ ಕೈಗೊಂಡಿರುವುದಾಗಿ ಕಂಪನಿಗಳು ಹೇಳಿವೆ. ಆದರೆ ಭಾರತದಲ್ಲಿ ಎರಡರ ಸಂಬಂಧ ಮುರಿದು ಬಿದ್ದರೂ, ವಿಶ್ವದ ಇತರೆ ದೇಶಗಳಲ್ಲಿ ಎರಡೂ ಕಂಪನಿಗಳ ಸಂಬಂಧ ಎಂದಿನಂತೆ ಮುಂದುವರೆಯುತ್ತದೆ ಎಂದು ಕಂಪನಿಗಳು ಹೇಳಿವೆ.

ಏಪ್ರಿಲ್ 1 ರ ನಂತರ ಕವಾಸಕಿ ಬೈಕುಗಳ ಮಾರಾಟ, ಸರ್ವೀಸ್ ಮುಂತಾದ ಸೇವೆಗಳನ್ನು ಇಂಡಿಯಾ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ನೀಡುವುದಾಗಿ ಕಂಪನಿ ಹೇಳಿದೆ. ಕವಾಸಕಿ ಇಂಡಸ್ಟ್ರೀಸ್ ಜಪಾನ್ ನ ಅಂಗಸಂಸ್ಥೆ ಇದು. 2009 ರಲ್ಲಿ ಮಾರಾಟ, ಮಾರಾಟನಂತರ ಸೇವೆಗಳಿಗಾಗಿ ಬಜಾಜ್ ಆಟೋ, ಕವಾಸಕಿಗಳು ಮೈತ್ರಿ ಮಾಡಿಕೊಂಡಿದ್ದವು. ಅಂದಿನಿಂದ ಮೈತ್ರಿಯಲ್ಲಿ ಇವರೆಡೂ ಕಂಪನಿಗಳು ಸೇವೆ ನೀಡುತ್ತಿವೆ.

ಭಾರತದ ನಗರಗಳಲ್ಲಿ ವಿಸ್ತರಿಸುತ್ತಿರುವ ಕವಾಸಕಿ ಸದ್ಯ 12 ಶೋರೂಮ್ ಗಳನ್ನು ಹೊಂದಿದೆ. 14 ಕವಾಸಕಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಪರಸ್ಪರ ಒಪ್ಪಿಗೆಯಿಂದಲೇ ತಾವು ಬೇರೆ ಬೇರೆಯಾಗುವ ತೀರ್ಮಾನಕ್ಕೆ ಬಂದಿರುವುದಾಗಿ ಬಜಾಜ್ ಆಟೋ ಹೇಳಿದೆ.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache