ಬಾಲಯ್ಯನ “ಪೈಸಾ ವಸೂಲ್” – News Mirchi

ಬಾಲಯ್ಯನ “ಪೈಸಾ ವಸೂಲ್”

ಐತಿಹಾಸಿಕ ಕಥೆಯನ್ನಾಧರಿಸಿದ ತಮ್ಮ ನೂರನೇ ಚಿತ್ರವಾದ ಗೌತಮೀಪುತ್ರ ಶಾತಕರ್ಣಿ ಚಿತ್ರದ ಯಶಸ್ಸಿನ ನಂತರ ಮತ್ತೊಮ್ಮೆ ಅಭಿಮಾನಿಗಳಿಗೆ ಹೊಸ ರೀತಿಯ ಪಾತ್ರದ ಮೂಲಕ ರಸದೌತಣ ನೀಡಲಿದ್ದಾರೆ ಟಾಲಿವುಡ್ ನ ಟಾಪ್ ಹೀರೋ ಬಾಲಕೃಷ್ಣ.

ಪ್ರಮುಖ ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಬಾಲಕೃಷ್ಣ ನಟಿಸುತ್ತಿರುವುದು ತಿಳಿದಿದ್ದೇ. ಜೂನ್ 10ರಂದು ಬಾಲಕೃಷ್ಣ ಅವರ ಹುಟ್ಟುಹಬ್ಬದ ಸಂದರ್ಭವನ್ನು ಬಳಸಿಕೊಂಡು ಚಿತ್ರದ ಹೆಸರನ್ನು ಬಹಿರಂಗಪಡಿಸಿದೆ ಚಿತ್ರತಂಡ. ಸ್ಟೈಲಿಷ್ ಲುಕ್ ನಲ್ಲಿ ನಿಂತಿರುವ ಪೋಸ್ಟರ್ ಬಿಡುಗಡೆ ಮಾಡಿರುವ ನಿರ್ಮಾಪಕರು ಚಿತ್ರಕ್ಕೆ “ಪೈಸಾ ವಸೂಲ್” ಎಂದು ಹೆಸರಿಟ್ಟಿದ್ದಾರೆ.

ಈ ಹಿಂದೆ ಚಿತ್ರಕ್ಕೆ ಉಸ್ತಾದ್, ತೇಡಾ ಸಿಂಗ್, ಜೈ ಬಾಲಯ್ಯ, ಪೈಸಾ ವಸೂಲ್ ಮುಂತಾದ ಹೆಸರುಗಳನ್ನು ಪರಿಶೀಲಿಸಿದ ನಂತರ ಕೊನೆಗೆ ಚಿತ್ರತಂಡ ಪೈಸಾ ವಸೂಲ್ ಹೆಸರನ್ನು ಅಂತಿಮಗೊಳಿಸಿದೆ.

ಭವ್ಯ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ವಿ.ಆನಂದ್ ಪ್ರಸಾದ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅನೂಪ್ ರೂಬೆನ್ಸ್ ಸಂಗೀತ ನೀಡುತ್ತಿರುವ ಈ ಚಿತ್ರದಲ್ಲಿ ಡಾನ್ ಪಾತ್ರದಲ್ಲಿ ಬಾಲಕೃಷ್ಣ ನಟಿಸುತ್ತಿದ್ದಾರೆ. ಬಾಲಕೃಷ್ಣ ಮತ್ತು ಪೂರಿ ಜಗನ್ನಾಥ್ ಇಬ್ಬರಿಂದಲೂ ಅಭಿಮಾನಿಗಳು ನಿರೀಕ್ಷಿಸುವ ಅಂಶಗಳು ಈ ಚಿತ್ರದಲ್ಲಿರುತ್ತವಂತೆ. ಸದ್ಯ ಪೋರ್ಚುಗಲ್ ನಲ್ಲಿ ಪ್ರಮುಖ ಚೇಸಿಂಗ್ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದು, ಕೆಲ ಹಾಡುಗಳನ್ನು ಚಿತ್ರೀಕರಿಸಲಾಗುತ್ತಿದೆ.

Loading...