ಯುಪಿ ಎಟಿಎಸ್ ಗೆ ಸೆರೆ ಸಿಕ್ಕ ಬಾಂಗ್ಲಾ ಉಗ್ರ… – News Mirchi
We are updating the website...

ಯುಪಿ ಎಟಿಎಸ್ ಗೆ ಸೆರೆ ಸಿಕ್ಕ ಬಾಂಗ್ಲಾ ಉಗ್ರ…

ಮುಜಫರ್ ನಗರ: ಉತ್ತರ ಪ್ರದೇಶದ ಉಗ್ರ ನಿಗ್ರಹ ಪಡೆ (ಯುಪಿ ಎಟಿಎಸ್) ಭಾನುವಾರ ಬಾಂಗ್ಲಾ ಉಗ್ರನೊಬ್ಬನನ್ನು ಬಂಧಿಸಿದೆ. ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿದ ಬಾಂಗ್ಲಾದೇಶದ ಉಗ್ರನನ್ನು ಯುಪಿ ಎಟಿಎಸ್ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದೆ. ಮುಜಫರ್ ನಗರದಲ್ಲಿ ವಾಸ್ತವ್ಯ ಹೂಡಿದ್ದ ಬಂಧಿತ ಉಗ್ರ ಅಬ್ದುಲ್ಲಾ ಅಲ್ ಮೊಮನ್ , ಹಲವು ವಿದೇಶೀ ಉಗ್ರರು ದೇಶದೊಳಗೆ ಬರಲು ಅನುಕೂಲವಾಗುವಂತೆ ನಕಲಿ ಗುರುತಿನ ಚೀಟಿಗಳನ್ನು ಸಿದ್ಧಪಡಿಸುತ್ತಿದ್ದನೆಂದು ತಿಳಿದುಬಂದಿದೆ.

ಮಳೆಗಾಗಿ ಪರಸ್ಪರ ಮದುವೆಯಾದ ಇಬ್ಬರು ಪುರುಷರು

ಸೆರೆ ಸಿಕ್ಕ ಈ ಉಗ್ರ, ಬಾಂಗ್ಲಾ ದೇಶದ ಅನ್ಸಾರುಲ್ಲಾ ಬಂಗ್ಲಾ ಟೀಮ್(ಎಬಿಟಿ) ಗೆ ಸೇರಿದವನೆಂದು ಪತ್ತೆ ಹಚ್ಚಲಾಗಿದೆ. 2011 ರಿಂದ ಈತ ಇಲ್ಲಿ ವಾಸವಿದ್ದಾನೆ. ಬಾಂಗ್ಲಾದೇಶದಲ್ಲಿನ ಉಗ್ರ ಸಂಘಟನೆ ಸದಸ್ಯರಿಗೆ ಚೀಟಿಗಳನ್ನು ಒದಗಿಸುವ ಮೂಲಕ ಇಲ್ಲಿ ನೆಲೆಸಲು ಅನುಕೂಲ ಮಾಡಿಕೊಡುವುದೇ ಆತನ ಮುಖ್ಯ ಹೊಣೆಯಾಗಿತ್ತು ಎಂದು ವಿಚಾರಣೆಯಲ್ಲಿ ಹೇಳಿದ್ದಾನೆ. ಉತ್ತರ ಪ್ರದೇಶ ಉಗ್ರಹ ನಿಗ್ರಹ ಪಡೆ ಉಗ್ರನ ಭಾವಚಿತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.

ಸೇನೆಯ ಭರ್ಜರಿ ಬೇಟೆ, ಮೂವರು ಲಷ್ಕರ್ ಉಗ್ರರ ಹತ್ಯೆ

Contact for any Electrical Works across Bengaluru

Loading...
error: Content is protected !!