ಶನಿವಾರ ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಮಾತ್ರ

ಶನಿವಾರ ಹಳೆ ನೋಟು ಬದಲಾಯಿಸಿಕೊಳ್ಳಲು ಹೋಗುತ್ತಿದ್ದೀರಾ? ಹಾಗಾದರೆ ಗಮನಿಸಿ, 19 ರಂದು ಅಂದರೆ ಶನಿವಾರ ಬ್ಯಾಂಕುಗಳು ಕೆಲಸ ಮಾಡುತ್ತವೆಯಾದರೂ, ಕೇವಲ ಹಿರಿಯ ನಾಗರಿಕರು ಮಾತ್ರ ಬ್ಯಾಂಕುಗಳ ಸೇವೆ ಪಡೆಯಬಹು. ಈ ವಿಷಯವನ್ನು ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜೀವ್ ರಿಷಿ ಹೇಳಿದ್ದಾರೆ.

ಎರಡನೇ ಶನಿವಾರ, ಭಾನುವಾರಗಳೂ ಸಹ ಕಾರ್ಯನಿರ್ವಹಿಸಿದ ಬ್ಯಾಂಕುಗಳು ಈ ಶನಿವಾರ ಹಿರಿಯ ನಾಗರಿಕರಿಗೆ ಮಾತ್ರ ಸೇವೆ ನೀಡಲಿದ್ದು, ಅಂದು ಬಾಕಿ ಉಳಿಸಿಕೊಂಡಿರುವ ಬ್ಯಾಂಕ್ ಕೆಲಸಗಳನ್ನು ಪೂರ್ಣಗೊಳಿಸುತ್ತಾರಂತೆ. ದೇಶದ ಎಲ್ಲಾ ಬ್ಯಾಂಕುಗಳಿಗೂ ಈ ನಿಬಂಧನೆಗಳು ಅನ್ವಯವಾಗುತ್ತವೆ ಎಂದು ರಾಜೀವ್ ಹೇಳಿದ್ದಾರೆ.