ರೈಲಿನ ಶೌಚಾಲಯದಲ್ಲಿ ಹಳೆಯ ನೋಟು ಪತ್ತೆ – News Mirchi
We are updating the website...

ರೈಲಿನ ಶೌಚಾಲಯದಲ್ಲಿ ಹಳೆಯ ನೋಟು ಪತ್ತೆ

ಭುವನೇಶ್ವರ್: ಕಪ್ಪು ಹಣ ಹೊಂದಿರುವವರು ಕೆಲವರು ಹಳೆಯ ನೋಟು ಬದಲಿಸಿಕೊಳ್ಳಲು ನಾನಾ ಕಳ್ಳ ಮಾರ್ಗಗಳನ್ನು ಹಿಡಿಯುತ್ತಿದ್ದಾರೆ. ಇನ್ನು ಕೆಲವರು ಅಂತಹ ಹಣವನ್ನು ಬಿಸಾಡಲು ಒದ್ದಾಡುತ್ತಿದ್ದಾರೆ. ನೋಟುಗಳನ್ನು ಕತ್ತರಿಸಿ ರಸ್ತೆ ಪಕ್ಕ ಬಿಸಾಡುವುದು, ಸುಟ್ಟು ನದಿಯಲ್ಲಿ ಬಿಸಾಡುವುದು ಮಾಡುತ್ತಿದ್ದಾರೆ.

ಇದೀಗ ಅಪರಿಚಿತ ವ್ಯಕ್ತಿಗಳು ದೆಹಲಿ- ಭುವನೇಶ್ವರ್ ರಾಜಧಾನಿ ಎಕ್ಸ್‌ಪ್ರೆಸ್ ಟಾಯ್ಲೆಟ್ ನಲ್ಲಿ ಹಳೆಯ ನೋಟುಗಳನ್ನು ಬಿಸಾಡಲು ಪ್ರಯತ್ನಿಸಿದ್ದಾರೆ. ರೈಲ್ವೇ ಪೊಲೀಸರು ರೈಲಿನ ಟಾಯ್ಲೆಟ್ ನಲ್ಲಿ ರೂ. 4.5 ಲಕ್ಷ ಮೌಲ್ಯದ 500, 1000 ಮುಖಬೆಲೆಯ ನೋಟುಗಳನ್ನು ಪತ್ತೆ ಹಚ್ಚಿದ್ದಾರೆ. ಪತ್ತೆಯಾದ ಹಣವನ್ನು ವಶಪಡಿಸಿಕೊಂಡು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿರುವುದಾಗಿ ರೈಲ್ವೇ ಎಸ್ಪಿ ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!