ತಿರುಪತಿಗೆ ತೆರಳಿದ್ದ ಬಿಬಿಎಂಪಿ ಸದಸ್ಯೆ ನಿಧನ

ಕುಟುಂಬದೊಂದಿಗೆ ತಿರುಪತಿಗೆ ಹೋಗಿದ್ದ ಬಿಬಿಎಂಪಿ ಸದಸ್ಯೆಯೊಬ್ಬರು ಹೃದಯಾಘಾತಕ್ಕೆ ತುತ್ತಾಗಿ ಮಂಗಳವಾರ ಸಾವನ್ನಪ್ಪಿದ್ದಾರೆ. 121ನೇ ವಾರ್ಡ್ ಬಿನ್ನಿಪೇಟೆಯನ್ನು ಪ್ರತಿನಿಧಿಸುತ್ತಿದ್ದ ಮಹದೇವಮ್ಮ ನಾಗರಾಜ್, ಕುಟುಂಬದ ಸದಸ್ಯರೊಂದಿಗೆ ತಿರುಪತಿಗೆ ತೆರಳಿದ್ದರು. ಅಲ್ಲಿಂದ ದೇವರ ದರ್ಶನ ಮುಗಿಸಿ ಹಿಂದಿರುಗತ್ತಿರುವ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರೂ ಮಾರ್ಗ ಮಧ್ಯದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಮಹದೇವಮ್ಮ ಅವರ ಮೃತದೇಹವನ್ನು ಬೆಂಗಳೂರಿಗೆ ರವಾನಿಸಲಾಗಿದೆ. ಪಾಲಿಕೆ ಸದಸ್ಯೆಯ ಸಾವಿಗೆ ಬಿಬಿಎಂಪಿ ಮೇಯರ್, ಪಾಲಿಕೆ ಸದಸ್ಯರು ಮತ್ತು ಪಾಲಿಕೆ ಆಯುಕ್ತರು ಸಂತಾಪ ಸೂಚಿಸಿದ್ದಾರೆ. ಮಹದೇವಮ್ಮ ನಿಧನದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಇಂದು ರಜೆ ಘೋಷಿಸಲಾಗಿದೆ.