ಕೊನೆಗೂ ರವಿಶಾಸ್ತ್ರಿ ನೇಮಕ ದೃಢಪಡಿಸಿದ ಬಿಸಿಸಿಐ – News Mirchi

ಕೊನೆಗೂ ರವಿಶಾಸ್ತ್ರಿ ನೇಮಕ ದೃಢಪಡಿಸಿದ ಬಿಸಿಸಿಐ

ಕೊನೆಗೂ ರವಿಶಾಸ್ತ್ರಿ ಮುಂದಿನ ಟೀಮ್ ಇಂಡಿಯಾ ಕೋಚ್ ಎಂಬುದನ್ನು ಬಿಸಿಸಿಐ ದೃಢಪಡಿಸಿದೆ. ಜಹೀರ್ ಖಾನ್ ಅವರನ್ನು ಬೌಲಿಂಗ್ ಕೋಚ್ ಮತ್ತು ರಾಹುಲ್ ದ್ರಾವಿಡ್ ಅವರನ್ನು ವಿದೇಶಿ ನೆಲದಲ್ಲಿ ಬ್ಯಾಟಿಂಗ್ ತರಬೇತುದಾರರನ್ನಾಗಿ ಮಾಡಿದೆ. ಇದಕ್ಕೂ ಮುನ್ನ ರವಿಶಾಸ್ತ್ರಿಯವರನ್ನು ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಪ್ರಧಾನ ತರಬೇತುದಾರರನ್ನಾಗಿ ನೇಮಕ ಮಾಡಿದ್ದಾಗಿ ಘೋಷಿಸಿದ ನಂತರ ಬಿಸಿಸಿಐ ಇಂತಹ ವರದಿಗಳನ್ನು ನಿರಾಕರಿಸಿತ್ತು. ಕೋಚ್ ವಿಚಾರದಲ್ಲಿ ಸಲಹಾ ಸಮಿತಿ ಕೇವಲ ಶಿಫಾರಸು ಮಾಡಿದೆ, ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಬಿಸಿಸಿಐ ಹೇಳಿತ್ತು.

ಜೂನ್ 19ರಂದು ಅನಿಲ್ ಕುಂಬ್ಳೆ ಟೀಮ್ ಇಂಡಿಯಾ ಮುಖ್ಯ ತರಬೇತುದಾರರ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕೊಹ್ಲಿಯೊಂದಿಗೆ ಭಿನ್ನಾಭಿಪ್ರಾಯಗಳೇ ಕುಂಬ್ಳೆ ರಾಜೀನಾಮೆ ನೀಡಲು ಕಾರಣ ಎಂಬುದು ಬಹಿರಂಗವಾಗಿತ್ತು. ಕುಂಬ್ಳೆಯ ಶಿಸ್ತು ಆಟಗಾರರ ವಿರೋಧ ಕಟ್ಟಿಕೊಳ್ಳಲು ಮುಖ್ಯ ಕಾರಣವಾಗಿತ್ತು ಎಂಬ ಮಾತುಗಳೂ ಕೇಳಿ ಬಂದಿದ್ದವು.

ಕುಂಬ್ಳೆ ಹುದ್ದೆಯ ಅವಧಿ ಮುಗಿಯುವ ಮುನ್ನವೇ ಬಿಸಿಸಿಐ ಹೊಸ ಕೋಚ್ ಹುಡುಕಾಟಕ್ಕೆ ಮುಂದಾಗಿ ಅರ್ಜಿ ಆಹ್ವಾನಿಸಿತ್ತು. ಕುಂಬ್ಳೆ ರಾಜೀನಾಮೆ ನೀಡಿದ ನಂತರ ಮತ್ತಷ್ಟು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ವೀರೇಂದ್ರ ಸೆಹವಾಗ್, ಲಾಲ್ ಚಂದ್ ರಜಪೂತ್, ಫಿಲ್ ಸಿಮ್ಮನ್ಸ್, ರವಿ ಶಾಸ್ತ್ರಿ, ಟಾಮ್ ಮೂಡಿ ಮತ್ತು ರಿಚರ್ಡ್ ಪೈಬಸ್ ಅವರನ್ನು ಬಿಸಿಸಿಐ ನ ಮೂವರು ಸದಸ್ಯರ ಕ್ರಿಕೆಟ್ ಸಲಹಾ ಸಮಿತಿಯು ಅಂತಿಮ ಸಂದರ್ಶನಕ್ಕೆ ಶಾರ್ಟ್ ಲಿಸ್ಟ್ ಮಾಡಿತ್ತು.

Loading...