ವರ್ಷದಲ್ಲಿ ಎರಡು ಐಪಿಎಲ್ ಸರಣಿಗಳು? – News Mirchi
We are updating the website...

ವರ್ಷದಲ್ಲಿ ಎರಡು ಐಪಿಎಲ್ ಸರಣಿಗಳು?

ನವದೆಹಲಿ: ಕ್ರಿಕೆಟ್ ಲೀಗ್ ಗಳಲ್ಲಿ ಐಪಿಎಲ್ ಗೆ ಇರುವ ಕ್ರೇಜ್ ಮತ್ಯಾವುದಕ್ಕೂ ಇಲ್ಲ. ಇತ್ತ ಮಂಡಳಿಗೆ, ಅತ್ತ ಆಟಗಾರರಿಗೆ ಹಣದ ಹೊಳೆ ಹರಿಸುತ್ತಿದೆ. ಭಾರತದಲ್ಲಿ ನಡೆಯುವ ಈ ಟೂರ್ನಿ ಕ್ರಿಕೆಟ್ ನ್ಲಲಿ ಅತ್ಯಂತ ಮಹತ್ವ ಪಡೆದಿದೆ. ಈ ಟೂರ್ನಿಯನ್ನು ನೋಡಲು ಹಲವು ದೇಶಗಳಿಂದ ಕ್ರಿಕೆಟ್ ಅಭಿಮಾನಿಗಳು ಬರುತ್ತಾರೆ. ಐಪಿಎಲ್ ಗೆ ಕ್ರೇಜ್ ಗಮನದಲ್ಲಿಟ್ಟುಕೊಂಡು ಮಿನಿ ಐಪಿಎಲ್ ಟೂರ್ನಿಯನ್ನು ಆರಂಭಿಸುವ ಚಿಂತನೆಯಲ್ಲಿದೆ ಬಿಸಿಸಿಐ ಎನ್ನಲಾಗುತ್ತಿದೆ. ವಿಶ್ವಾದ್ಯಂತ ಕ್ರೇಜ್ ಇರುವ ಐಪಿಎಲ್ ಅನ್ನು ವರ್ಷದಲ್ಲಿ ಒಮ್ಮೆ ಮಾತ್ರ ನಡೆಸುವುದು ಸರಿಯಲ್ಲ ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಹೇಳಿದ್ದಾರೆ.

ಈ ಇಂದೆ ನಡೆದ ಚಾಂಪಿಯನ್ಸ್ ಲೀಗ್ ಟಿ20 ವಿಫಲವಾದ್ದರಿಂದ, ಈಗ ಆ ಸ್ಥಾನದಲ್ಲಿ ಈ ಮಿನಿ ಐಪಿಎಲ್ ಆರಂಭಿಸಲು ಬಿಸಿಸಿಐ ನೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ. ಸದ್ಯ ಮಿನಿ ಐಪಿಎಲ್ ಆಯೋಜಿಸುವ ಕುರಿತು ಚರ್ಚೆ ನಡಯುತ್ತಿದೆ, ಶೀಘ್ರದಲ್ಲೇ ಮಿನಿ ಐಪಿಎಲ್ ಅನ್ನು ವಿದೇಶಗಳಲ್ಲಿ ನಡೆಸುತ್ತೇವೆ ಎಂದು ರಾಜೀವ್ ಹೇಳಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ದುಬೈನಲ್ಲಿ ಮಿನಿ ಐಪಿಎಲ್ ನಡೆಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ 2018ರಲ್ಲಿ ನಡೆಯುವ ಐಪಿಎಲ್ ನಲ್ಲಿ ಅಭಿಮಾನಿಗಳಿಗೆ ಮತ್ತಷ್ಟು ಮನರಂಜನೆ ನೀಡಲು ಐಪಿಎಲ್ ನಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದು ಎಂದರು. ಮುಂದಿನ ಹತ್ತು ವರ್ಷಗಳಲ್ಲಿ ಐಪಿಎಲ್ ಮತ್ತಷ್ಟು ಜನರಿಗೆ ಹತ್ತಿರವಾಗುವಂತೆ, ಆಕರ್ಷಿಸುವಂತೆ ಯೋಜನೆ ರೂಪಿಸುತ್ತಿರುವುದಾಗಿ ಶುಕ್ಲಾ ಹೇಳಿದರು. ಐಪಿಎಲ್-11 ಸೀಸನ್ ನಲ್ಲಿ 8 ತಂಡಗಳೇ ಆಡಲಿವೆ ಎಂದು ಸ್ಪಷ್ಟಪಡಿಸಿದರು.

Contact for any Electrical Works across Bengaluru

Loading...
error: Content is protected !!