ಸರ್ಕಾರಿ ಕಲಾಮಂದಿರದಲ್ಲಿ ಗೋಮಾಂಸ ಭಕ್ಷಿಸಿ ಕಾರ್ಯಕ್ರಮ ಉದ್ಘಾಟನೆ, ಸಾರ್ವಜನಿಕರ ಆಕ್ರೋಶ – News Mirchi

ಸರ್ಕಾರಿ ಕಲಾಮಂದಿರದಲ್ಲಿ ಗೋಮಾಂಸ ಭಕ್ಷಿಸಿ ಕಾರ್ಯಕ್ರಮ ಉದ್ಘಾಟನೆ, ಸಾರ್ವಜನಿಕರ ಆಕ್ರೋಶ

ಮೈಸೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿ ಕಲಾಮಂದಿರದಲ್ಲಿ ಚಾರ್ವಾಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ಆಯೋಜಿಸಿದ್ದ ಆಹಾರ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯ ಗೋಷ್ಠಿಯನ್ನು ಗೋಮಾಂಸ ಸೇವಿಸಿ ಉದ್ಘಾಟಿಸಿದ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೂ ಗೋಮಾಂಸದ ಜೊತೆ, ಚಿಕನ್ ಕಬಾಬ್ ಮತ್ತು ಸಸ್ಯಾಹಾರಿ ತಿಂಡಿಗಳನ್ನೂ ಪೂರೈಸಲಾಗಿತ್ತು.

ವಿವಾದಿತ ವಿಚಾರವಾದಿ ಪ್ರೊ.ಭಗವಾನ್, ಮೈಸೂರು ವಿವಿ ಪ್ರೊ.ಮಹೇಶ್ ಚಂದ್ರ ಗುರು, ಮಾಜಿ ಮೇಯರ್ ಮತ್ತಿತರ ಗಣ್ಯರು ಗೋಮಾಂಸ ಸೇವಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಸಭಾಂಗಣದಲ್ಲಿ ಮಾಂಸಾಹಾರ ಸೇವೆನೆಗೆ ಮೈಸೂರಿನ ಕನ್ನಡ ವೇದಿಕೆ ಕಾರ್ಯಕರ್ತರು, ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಕಾರ್ಯಕ್ರಮದ ಆಯೋಜಕರು ಮತ್ತು ಸಭಾಂಗಣದ ಉಸ್ತುವಾರಿಗಳಿಗೆ ನೋಟೀಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Contact for any Electrical Works across Bengaluru

Loading...
error: Content is protected !!