ಬೀಫ್ ಫೆಸ್ಟ್ ನಡೆಸಿದ್ದ ವಿದ್ಯಾರ್ಥಿಯ ಮೇಲೆ ದಾಳಿ, ಕಣ್ಣಿಗೆ ಗಂಭೀರ ಗಾಯ – News Mirchi

ಬೀಫ್ ಫೆಸ್ಟ್ ನಡೆಸಿದ್ದ ವಿದ್ಯಾರ್ಥಿಯ ಮೇಲೆ ದಾಳಿ, ಕಣ್ಣಿಗೆ ಗಂಭೀರ ಗಾಯ

ಐಐಟಿ ಮದ್ರಾಸ್ ಆವರಣದಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಬೀಫ್ ಫೆಸ್ಟ್ (ಗೋಮಾಂಸ ಹಬ್ಬ) ಆಯೋಜಿಸಿದವರಲ್ಲೊಬ್ಬನ ಮೇಲೆ ವಿದ್ಯಾರ್ಥಿಗಳ ಮತ್ತೊಂದು ಗುಂಪು ದಾಳಿ ನಡೆಸಿದ ಘಟನೆ ನಡೆದಿದೆ‌. ಬೀಫ್ ಫೆಸ್ಟ್ ನಲ್ಲಿ ಪಾಲ್ಗೊಂಡ ಇತರರಿಗೂ ಈ ಗುಂಪು ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.

ಕಸಾಯಿಖಾನೆಗಳಿಗೆ ದನಗಳನ್ನು ಮಾರುವುದು ನಿಷೇಧಿಸಿ ಕೇಂದ್ರ ತೀರ್ಮಾನ ಕೈಗೊಂಡಿರುವುದನ್ನು ವಿರೋಧಿಸಿ, ಸೋಮವಾರ ಸುಮಾರು 50 ಮದ್ರಾಸ್ ಐಐಟಿ ವಿದ್ಯಾರ್ಥಿಗಳು ವಿವಿ ಆವರಣದಲ್ಲಿ ಬೀಫ್ ಫೆಸ್ಟ್ ಆಚರಿಸಿದ್ದರು.

ಹಲ್ಲೆಗೊಳಗಾದ ವಿದ್ಯಾರ್ಥಿ ಸೂರಜ್ ಹೇಳುವಂತೆ, 7 ವಿದ್ಯಾರ್ಥಿಗಳು ಮಧ್ಯಾಹ್ನ ಊಟದ ಸಮಯದಲ್ಲಿ ಹಾಸ್ಟೆಲ್ ಕ್ಯಾಂಟೀನ್ ಬಳಿ ಆತನನ್ನು ಸುತ್ತುವರೆದು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಸೂರಜ್ ನ ಬಲಗಣ್ಣಿಗೆ ಗಂಭೀರವಾಗಿ ಗಾಯವಾಗಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Loading...