50 ಲಕ್ಷದೊಂದಿಗೆ ಬ್ಯಾಂಕಿಗೆ ಹೋದ ಭಿಕ್ಷುಕ, ಶಾಕ್ ಆದ ಸಿಬ್ಬಂದಿ?

ಒಬ್ಬ ಭಿಕ್ಷುಕ ಬ್ಯಾಂಕಿಗೆ ಎಷ್ಟು ಹಣದೊಂದಿಗೆ ಹೋಗಬಹುದು? ಭಿಕ್ಷೆ ಬೇಡಿ ಕೂಡಿಟ್ಟ ಕೆಲ ನೂರುಗಳು, ಸಾವಿರ ಅಥವಾ ಹೆಚ್ಚೆಂದರೆ ಐದು ಸಾವಿರ ರೂಪಾಯಿ. ಆದರೆ ಇಲ್ಲೊಬ್ಬ ಭಿಕ್ಷುಕ ಮಾತ್ರ ರೂ. 50 ಲಕ್ಷ ಹಣದೊಂದಿಗೆ ಭಿಕ್ಷುಕನ ವೇಷದಲ್ಲಿಯೇ ಬ್ಯಾಂಕಿಗೆ ಬಂದಿದ್ದಾನೆ. ಇದನ್ನು ನೋಡಿದ ಬ್ಯಾಂಕಿನಲ್ಲಿದ್ದ ಇತರ ಗ್ರಾಹಕರು ಮತ್ತು ಬ್ಯಾಂಕ್ ಸಿಬ್ಬಂದಿ ಅವಾಕ್ಕಾದರು. ಭಿಕ್ಷುಕ ತನ್ನ ಬಳಿ ಇದ್ದ 50 ಲಕ್ಷ ಹಣ ಹೊರತೆಗೆಯುತ್ತಿದ್ದಂತೆ ಸಾಲಿನಲ್ಲಿ ನಿಂತಿದ್ದ ಜನರೆಲ್ಲಾ ಆಶ್ಚರ್ಯಗೊಂಡರು.

ವ್ಯಾಸ ರಚಿತ ಮಹಾಭಾರತ

50 ಲಕ್ಷ ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿ ಎಂದು ಆತ ಬ್ಯಾಂಕ್ ಅಧಿಕಾರಿಗಳಿಗೆ ಕೇಳಿದ. ಶಾಕ್ ನಿಂದ ಹೊರಬಂದ ಅಧಿಕಾರಿಗಳು, ಇಷ್ಟು ದೊಡ್ಡ ಮೊತ್ತದ ಹಣವನ್ನು ಜಮೆ ಮಾಡಲು ಪಾನ್ ಕಾರ್ಡ್ ಕಡ್ಡಾಯ ಎಂದು ಹೇಳಿದರು. ಅಷ್ಟು ದುಡ್ಡು ಇಟ್ಟವನ ಬಳಿ ಪಾನ್ ಕಾರ್ಡ್ ಇಲ್ಲದಿರುತ್ತದಾ? ಕೂಡಲೇ ಜೇಬಿನಿಂದ ಪಾನ್ ಕಾರ್ಡ್ ತೆಗೆದುಕೊಟ್ಟ. ಅಲ್ಲಿ ಸಾಲಿನಲ್ಲಿ ನಿಂತಿದ್ದ ಜನ ಮೂರ್ಛೆ ಹೋಗುವುದೊಂದೇ ಬಾಕಿ.

ಆ ಹಣವನ್ನು ಅಕೌಂಟಿಗೆ ಹಾಕದೆ ಅಧಿಕಾರಿಗಳು ಅ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ. ತನ್ನ ಎರಡು ಎಕರೆ ಜಮೀನು ಮಾರಿದ ದುಡ್ಡು ಇದು ಎಂದು ಆತ ಉತ್ತರಿಸಿದ. ಅದಕ್ಕೆ ಸಂಬಂಧಿಸಿದ ದಾಖಲೆ ತರಬೇಕೆಂಬ ಅಧಿಕಾರಿಗಳ ಮಾತಿಗೆ ಸರಿ ಎಂದ ಭಿಕ್ಷುಕ, ದಾಖಲೆ ಪತ್ರ ತರಲು ಮನೆಗೆ ವಾಪಸ್ ಹೋದ. ಈ ಘಟನೆ ತೆಲಂಗಾಣದ ವಿಕಾರಾಬಾದ್ ನಲ್ಲಿ ನಡೆದಿರುವಂತೆ ಯೂಟ್ಯೂಬ್ ವೀಡಿಯೋ ಒಂದನ್ನು ಅಲ್ಲಿನ ಟಿವಿ ಚಾನೆಲ್ ಪ್ರಸಾರ ಮಾಡಿದೆ. ಆದರೆ ಅಧಿಕಾರಿಗಳು ಮಾತ್ರ ಇಂತಹ ಘಟನೆ ನಡೆದಿಲ್ಲ ಎನ್ನುತ್ತಿದ್ದಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಇಂತಹ ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ ಎನ್ನುತ್ತಿದ್ದಾರೆ.

Related Post

error: Content is protected !!