ಎರಡನೇ ತ್ರೈಮಾಸಿಕದಲ್ಲಿ ಬೆಸ್ಟ್ ಸೆಲ್ಲರ್ ಸ್ಮಾರ್ಟ್ ಫೋನ್ ಗಳಿವು – News Mirchi

ಎರಡನೇ ತ್ರೈಮಾಸಿಕದಲ್ಲಿ ಬೆಸ್ಟ್ ಸೆಲ್ಲರ್ ಸ್ಮಾರ್ಟ್ ಫೋನ್ ಗಳಿವು

ಇತ್ತೀಚೆಗೆ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಜಿಯೋಮಿ ದೊಡ್ಡ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಪ್ರತಿ ಬಾರಿಯೂ ಜಿಯೋಮಿ ಸ್ಮಾರ್ಟ್ ಫೋನ್ ಗಳು ಹೊಸ ವೈಶಿಷ್ಟ್ಯತೆಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ. 10 ಸಾವಿರ ರೂಪಾಯಿಗಿಂತಲೂ ಕೆಡಿಮೆ ದರವಿರುವ ಕೆಟಗರಿಯಲ್ಲಿ ಜಿಯೋಮಿ ಸ್ಮಾರ್ಟ್ ಫೋನ್ ಗಳು ಸ್ಯಾಮ್ಸಂಗ್ ಅನ್ನು ಹಿಂದೆ ಹಾಕಿವೆ. 2017 ರ ಎರಡನೇ ತ್ರೈಮಾಸಿಕದಲ್ಲಿ ಬಾರತದಲ್ಲಿ ರೂ.10 ಸಾವಿರಕ್ಕಿಂತಲೂ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳಲ್ಲಿ ಜಿಯೋಮಿ ಬೆಸ್ಟ್ ಸೆಲ್ಲರ್ ಆಗಿ ನಿಂತಿದೆ ಎಂದು ಕೌಂಟರ್ ಪಾಯಿಂಟ್ ರಿಸರ್ಚ್ ಹೇಳಿದೆ.

ಜಿಯೋಮಿಯ ರೆಡ್ಮಿ ನೋಟ್ 4 ಸ್ಮಾರ್ಟ್ ಫೋನ್ ಶೇ.7.2 ರಷ್ಟು ಮಾರುಕಟ್ಟೆ ಪಾಲು ಹೊಂದಿದ್ರೆ, ರೆಡ್ಮಿ 4 ಸ್ಮಾರ್ಟ್ ಫೋನ್ ಶೇ.4.5 ರಷ್ಟು ಮಾರ್ಕೆಟ್ ಷೇರು ತನ್ನದಾಗಿಸಿಕೊಂಡು ಎರಡನೇ ಸ್ಥಾನದಲ್ಲಿ ನಿಂತಿದೆ. ಇನ್ನು ಮೂರನೇ ಸ್ಥಾನದಲ್ಲಿ ಶೇ.4.3 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಸ್ಯಾಮ್ಸಂಗ್ ಗ್ಯಾಲಾಕ್ಸಿ ಜೆ2 ನಿಂತಿದೆ.

ರೂ. 10 ಸಾವಿರ ಬೆಲೆಯೊಳಗಿನ ಸ್ಮಾರ್ಟ್ ಫೋನ್ ಗಳಿಗಾಗಿ ಜಿಯೋಮಿಗೆ ಹೆಚ್ಚು ಬೇಡಿಕೆ ಬರುತ್ತಿದ್ದು, 2017 ರ ಪ್ರಥಮಾರ್ಧದಲ್ಲಿ ರೆಡ್ಮಿ ನೋಟ್ 4 ಟಾಪ್ ಸೆಲ್ಲಿಂಗ್ ಮಾಡೆಲ್ ಆಗಿದೆ ಎಂದು ಕೌಂಟರ್ ಪಾಯಿಂಟ್ ರಿಸರ್ಚ್ ಅಸೋಸಿಯೇಟ್ ಡೈರೆಕ್ಟರ್ ತರುಣ್ ಪಥಕ್ ಹೇಳಿದ್ದಾರೆ. ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಅನ್ನು ಇತರೆ ಬ್ರಾಂಡ್ ಗಳು ಹಿಂದಿಕ್ಕಿರುವುದು ಇದೇ ಮೊದಲಬಾರಿ ಎಂದು ಅವರು ಹೇಳಿದ್ದಾರೆ.

ಪತಂಜಲಿ ಹೊಡೆತಕ್ಕೆ ದಂಗಾದ ಕೋಲ್ಗೇಟ್, ಜನರ ಅಭಿರುಚಿಗೆ ತಕ್ಕಂತೆ ಬದಲಾವಣೆಗೆ ಚಿಂತನೆ

ಕಳೆದ ನಾಲ್ಕು ವರ್ಷಗಳಿಂದ ಬೆಸ್ಟ್ ಸೆಲ್ಲರ್ ಸ್ಲಾಟಿನಲ್ಲಿ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಗಳೇ ಮುಂಚೂಣಿಯಲ್ಲಿದ್ದವು. ಆದರೆ ಈ ಬಾರಿ ಟ್ರೆಂಡ್ ಬದಲಾಗಿದೆ ಎಂದು ಹೇಳಿದ್ದಾರೆ. ಆದರೆ ಒಟ್ಟಾರೆ ಸ್ಮಾರ್ಟ್ ಫೋನ್, ಫೀಚರ್ ಫೋನ್ ಗಳಲ್ಲಿ ಸ್ಯಾಮ್ಸಂಗ್ ಕಂಪನಿಯೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಫೀಚರ್ ಫೋನ್ ಕ್ಯಾಟಗೆರಿಯಲ್ಲಿ ಶೇ.25.4 ರಷ್ಟು ಮಾರುಕಟ್ಟೆ ಷೇರು ಹೊಂದಿರುವ ಸ್ಯಾಮ್ಸಂಗ್, ಸ್ಮಾರ್ಟ್ ಫೋನ್ ಕ್ಯಾಟಗೆರಿಯಲ್ಲಿ ಶೇ.24.1 ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.

Loading...