ಬೇಡದಿದ್ದರೂ ಆಪರೇಷನ್, ಓಕೆ ಎನ್ನುವ ಮುನ್ನ ಯೋಚಿಸಿ

ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾದರೆ ಎಚ್ಚರದಿಂದಿರಿ. ಅಲ್ಲಿ ಯಾವುದಾದರೂ ಮಾಡಬೇಕೆಂದು ಆತುರಪಡಿಸಿ ಅನಗತ್ಯವಾಗಿ ಆತಂಕ ಸೃಷ್ಟಿಸಿದರೆ ಮತ್ತೆ ಮತ್ತೆ ಯೋಚಿಸಿ. ಅಸಲಿಗೆ ಆತಂಕ ಪಡುವಂತಹ ಪರಿಸ್ಥಿತಿಯಲ್ಲಿ ನಿಮ್ಮ ಸಮಸ್ಯೆ ಇದೆಯಾ? ಎಂಬುದರ ಕುರಿತು ಸ್ವಲ್ಪ ಯೋಚಿಸಿ. ಕೂಡಲೇ ಮಾಡಲು ಒಪ್ಪಿಕೊಳ್ಳದಿರಿ, ಸ್ವಲ್ಪ ಸಮಯ ತೆಗೆದುಕೊಳ್ಳಿ. ಮೊದಲು ಅಲ್ಲಿಂದ ಹೊರಹೋಗಿ, ನಂತರ ಸಂಬಂಧಿಸಿದ ದಾಖಲೆಗಳೊಂದಿಗೆ ಹೋಗಿ ಮತ್ತೊಂದು ಅಭಿಪ್ರಾಯ ಪಡೆದುಕೊಳ್ಳಿ. ಗಂಭೀರ, ತುರ್ತು ಸಂದರ್ಭಗಳಲ್ಲಿ ಏನೂ ಮಾಡಲಾಗುವುದಿಲ್ಲ. ಆದರೆ ಅನಗತ್ಯವಾಗಿ ಸಣ್ಣಪುಟ್ಟ ಸಮಸ್ಯೆಗಳಿಗೆಲ್ಲಾ ಉದ್ದೇಶಪೂರ್ವಕವಾಗಿ ಆತುರ ಪ್ರದರ್ಶಿಸಿ ಗೊಂದಲ ಹುಟ್ಟಿಸುವ ವೈದ್ಯರು ದುಬಾರಿ ಆಸ್ಪತ್ರೆಗಳಲ್ಲಿದ್ದಾರೆ ಎಚ್ಚರ.

ಅವಶ್ಯಕತೆಯಿಲ್ಲದಿದ್ದರೂ ಕಣ್ಣಿನ ನಡೆಸುತ್ತಿದ್ದಾರೆ ಎಂಬ ಆರೋಪಗಳಿವೆ. ಇಂತಹ ಮಾಡಲೇಬೇಕಾದ ರೋಗಗಳು ಕೆಲ ದುಬಾರಿ ಆಸ್ಪತ್ರೆಗಳಲ್ಲಿ ಮಾತ್ರ ಎದುರಾಗುತ್ತವೆ. ಅಷ್ಟೇ ಅಲ್ಲದೆ, ದುಡ್ಡು ಎಷ್ಟಾದರೂ ಸರಿ ಡಾಕ್ಟ್ರೇ, ವಾಸಿ ಮಾಡಿ ಎಂಬ ದೌಲತ್ತು ಪ್ರದರ್ಶಿಸಿದರೆ ಬಿತ್ತು ಜೇಬಿಗೆ ಮತ್ತು ದೇಹಕ್ಕೆ ಕತ್ತರಿ ಅಂತಲೇ ಅರ್ಥ. ಅಸಲಿಗೆ ವೈದ್ಯರು ಹೀಗೇಕೆ ಮಾಡುತ್ತಾರೆ ಎಂಬುದನ್ನು ನೋಡೋಣ. ದುಬಾರಿ ಆಸ್ಪತ್ರೆಗಳಲ್ಲಿ ಒಬ್ಬ ವೈದ್ಯರಿಗೆ ಏನಿಲ್ಲವೆಂದರೂ 1.5 ಲಕ್ಷ ವೇತನ ನೀಡಬೇಕು. ಅಷ್ಟು ವೇತನ ನೀಡುವ ಆಸ್ಪತ್ರೆ ಆ ವೈದ್ಯನಿಂದ ಇನ್ನೂ ಹೆಚ್ಚಿನ ಸಂಪಾದನೆಯನ್ನೇ ನಿರೀಕ್ಷಿಸುವುದು ಸಹಜ. ಕನಿಷ್ಟವೆಂದರೂ 1.5 ಲಕ್ಷ ವೇತನ ಪಡೆಯುವ ವೈದ್ಯನಿಂದ 4.5 ಲಕ್ಷ ಸಂಪಾದನೆ ಬಯಸುತ್ತದೆ ಆಸ್ಪತ್ರೆ ಎಂದಿಟ್ಟುಕೊಳ್ಳಿ, ಆಗ ಆ ವೈದ್ಯರಿಗೆ ಸಹಜವಾಗಿ ಇಂತಿಷ್ಟು ಗಳು ಎಂದು ಟಾರ್ಗೆಟ್ ಫಿಕ್ಸ್ ಆಗುತ್ತವೆ. ನೀಡಿದ ಟಾರ್ಗೆಟ್ ತಲುಪಲು ನಿಮ್ಮ ದೇಹಕ್ಕೆ ಕತ್ತರಿ ಹಾಕದೆ ಅವರಿಗೆ ಬೇರೆ ದಾರಿ ಏನಿದೆ? (ಎಲ್ಲಾ ಆಸ್ಪತ್ರೆಗಳೂ ಹೀಗೆ ಎಂದು ಹೇಳುವುದು ನಮ್ಮ ಉದ್ದೇಶವಲ್ಲ)

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache