ಬ್ರಿಟೀಷ್ ಅಧಿಕಾರಿಯ ಎದೆ ಸೀಳಿದ್ದ ಭಗತ್ ಸಿಂಗ್ ಪಿಸ್ತೂಲ್ ಪತ್ತೆ

ನವದೆಹಲಿ: ಸ್ವಾಂತಂತ್ರ್ಯ ವೀರ, ಬ್ರಿಟೀಷರ ಎದೆಗೆ ಗುಂಡಿಕ್ಕಿ ನೇಣಿಗೇರಿದ್ದ ಭಾರತ ಮಾತೆಯ ಮುದ್ದಿನ ಕಂದ ಭಗತ್ ಸಿಂಗ್ ಬಳಸಿದ್ದ ಪಿಸ್ತೂಲ್ ಪತ್ತೆಯಾಗಿದೆ. ಇದರಿಂದಲೇ ಬ್ರಿಟನ್ ಅಧಿಕಾರಿ ಜಾನ್ ಸ್ಯಾಂಡರ್ಸ್ ನನ್ನು ಭಗತ್ ಸಿಂಗ್ ಕೊಂದಿದ್ದರು. ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದ್ದ ವೇಳೆ ಚಿಗುರು ಮೀಸೆಯ ವಯಸ್ಸಿನಲ್ಲಿಯೇ ಭಗತ್ ಸಿಂಗ್ ಬ್ರಿಟೀಷರಿಗೆ ಸೆಡ್ಡು ಹೊಡೆದಿದ್ದರು. 1928 ಡಿಸೆಂಬರ್ 17ರಂದು ಬ್ರಿಟೀಷ್ ಅಧಿಕಾರಿ ಜಾನ್ ಸ್ಯಾಂಡರ್ಸ್ ನನ್ನು ಸೀರಿಯಲ್ ನಂಬರ್ 168896 ಹೊಂದಿದ್ದ 32 ಎಂಎಂ ಕೋಲ್ಟ್ ಆಟೋಮ್ಯಾಟಿಕ್ ಪಿಸ್ತೂಲಿನಿಂದ ಕೊಂದಿದ್ದರು.

ಈ ಘಟನೆ ನಂತರ ಬ್ರಿಟೀಷರ ಎದೆ ನಡುಗಿಸಿದ್ದಂತೂ ಸುಳ್ಳಲ್ಲ. ಈ ಘಟನೆಯ ನಂತರ ಭಗತ್ ಸಿಂಗ್ ನನ್ನು ಹಿಡಿದು ಬಂಧಿಸಿ 1931 ರ ಮಾರ್ಚ್ 23 ರಂದು ಬ್ರಿಟೀಷರು ನೇಣಿಗೇರಿಸಿದ್ದರು. ಈ ಪಿಸ್ತೂಲನ್ನು ಬಿಎಸ್ಎಫ್ ಸೆಂಟ್ರಲ್ ಸ್ಕೂಲ್ ಆಫ್ ವೆಪನ್ಸ್, ಟ್ಯಾಕ್ಟಿಕ್ಸ್(ಸಿಡಬ್ಲ್ಯೂಎಸ್ಟಿ) ಮ್ಯೂಸಿಯಂನಲ್ಲಿ ಇಟ್ಟಿದ್ದರು. ಆದರೆ, ಈ ಪಿಸ್ತೂಲು ಭಗತ್ ಸಿಂಗ್ ಅವರದ್ದೇ ಎಂಬುದು ಮಾತ್ರ ಗೊತ್ತಿರಲಿಲ್ಲ. ಈ ಪಿಸ್ತೂಲಿನ ಮೇಲಿದ್ದ ಕಪ್ಪು ಬಣ್ಣವನ್ನು ಅಳಿಸಿ ಶುಭ್ರಗೊಳಿಸುವಾಗ ಅದರ ಮೇಲಿದ್ದ ಸೀರಿಯಲ್ ನಂಬರ್ ಕಾಣಿಸಿದ್ದು, ಇದರ ಆಧಾರದ ಮೇಲೆ ಈ ಪಿಸ್ತೂಲು ಭಗತ್ ಸಿಂಗ್ ನದ್ದು ಎಂದು ತಿಳಿದುಬಂದಿದೆ.

Loading...

Leave a Reply

Your email address will not be published.

error: Content is protected !!