ಭಾರತ್ ಬಂದ್: ಕಲಾಪ ಮುಂದೂಡಿಕೆ

: ನೋಟು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಪ್ರತಿಪಕ್ಷಗಳು ಸೋಮವಾರ ಭಾರತ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ 28 ರಂದು ನಡೆಯಬೇಕಿದ್ದ ಕಲಾಪವನ್ನು ಡಿಸೆಂಬರ್ 3ಕ್ಕೆ ಮುಂದೂಡಲಾಗಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಮೂರೂವರೆ ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಬಂದ್ ದಿನ ಭದ್ರತೆಗೆ ಸಿಬ್ಬಂದಿಯ ಕೊರತೆಯಾಗದಂತೆ ಕಲಾಪವನ್ನು ಮುಂದೂಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

ಆದರೆ ಸರ್ಕಾರದ ಈ ನಿರ್ಧಾರ ರಾಜಕೀಯದಿಂದ ಕೂಡಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.

Related News

loading...
error: Content is protected !!