ಪ್ರಧಾನಿ ಬಿಡುಗಡೆ ಮಾಡಿದ “ಭೀಮ್” ಮೊಬೈಲ್ ಆಪ್ ವಿಶೇಷತೆಗಳು – News Mirchi

ಪ್ರಧಾನಿ ಬಿಡುಗಡೆ ಮಾಡಿದ “ಭೀಮ್” ಮೊಬೈಲ್ ಆಪ್ ವಿಶೇಷತೆಗಳು

​ಡಿಸೆಂಬರ್ 30: ಪ್ರಧಾನಿ ನರೇಂದ್ರ ಮೋದಿ ಇ-ವಾಲೆಟ್ ಮೊಬೈಲ್ ಅಪ್ಲಿಕೇಶನ್ “ಭೀಮ್” ಅನ್ನು ಶುಕ್ರವಾರ “ಡಿಜಿ ಧನ್ ಮೇಳ” ದಲ್ಲಿ ಬಿಡುಗಡೆ ಮಾಡಿದರು. ಇದೊಂದು ಕ್ರಾಂತಿಕಾರಕ ಆಪ್ ಎಂದಯ ಪ್ರಧಾನಿ‌ ಬಣ್ಣಿಸಿದರು. ಮುಂದಿನ ದಿನಗಳಲ್ಲಿ “ಭೀಮ್”(ಭಾರತ್ ಇಂಟರ್‌ಫೇಸ್ ಫಾರ್ ಮನಿ) ಎಲ್ಲಾ ಕ್ಷೇತ್ರಗಳಲ್ಲಿನ ನಗದು ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ ಎಂದರು.
ಜನಸಾಮಾನ್ಯರಿಗೆ ಡಿಜಿಟಲ್ ವ್ಯವಹಾರಕ್ಕೆ ಅನುಕೂಲವಾಗುವಂತೆ “ಭೀಮ್” ಮೊಬೈಲ್ ಆಪ್ ವಿನ್ಯಾಸಗೊಳಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಭೀಮ್ ಆಪ್ ಬಗ್ಗೆ ಒಂದಷ್ಟು ಮಾಹಿತಿ

  • “ಭೀಮ್” ಅಥವಾ ಭಾರತ್ ಇಂಟರ್‌ಫೇಸ್ ಫಾರ್ ಮನಿ ಇ-ವ್ಯಾಲೆಟ್ ಆಪ್ ಆಗಿದ್ದು, ಭಾರತ ಸರ್ಕಾರದಿಂದ ಬಿಡುಗಡೆಯಾಗಿದೆ. ಇದು ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್(ಯುಪಿಐ) ಮತ್ತು ಯುಎಸ್‌ಎಸ್‌ಡಿ(ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವೀಸ್ ಡಾಟಾ) ದ ಸುಧಾರಿತ  ವರ್ಷನ್ ಆಗಿದೆ.
  • “ಭೀಮ್” ಎಲ್ಲಾ ರೀತಿಯ ಸ್ಮಾರ್ಟ್ ಫೋನ್ ಗಳಲ್ಲಿ ಕಾಎ್ಯನಿರ್ವಹಿಸುತ್ತದೆ. ಸದ್ಯ ಇದು ಆಂಡ್ರಾಯ್ಡ್ ಫೋನ್ ಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಶೀಘ್ರದಲ್ಲೇ ಇತರೆ ಆಪರೇಟಿಂಗ್ ಸಿಸ್ಟಂ ಹೊಂದಿರುವ ಮೊಬೈಲ್ ಗಳಿಗೂ ಲಭ್ಯವಾಗಲಿದೆ.
  • ಇದು ಆಧಾರ್ ಆಧಾರಿತ ಆಪ್ ಅಗಿದ್ದು, ನಿಮ್ಮ ಆಧಾರ್ ಸಂಖ್ಯೆ ಈ ಆಪ್ ಗೆ ಲಿಂಕ್ ಮಾಡಲಾಗುತ್ತದೆ.
  • ಮುಂದಿನ 20 ದಿನಗಳಲ್ಲಿ ಇದಕ್ಕೆ ಮತ್ತೊಂದು ಭದ್ರತಾ ವೈಶಿಷ್ಟ್ಯ ಸೇರಿಸಲಾಗುತ್ತದೆ. ಆಗ ಕೇವಲ ನಿಮ್ಮ ಬೆರಳಚ್ಚು ನೀಡಿದರೆ ಸಾಕು, ಯಾವುದೇ ಇಂಟರ್ನೆಟ್ ಬೇಕಾಗುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
  • ಪ್ರಧಾನಿ ಮೋದಿಯವರು ಈ ಆಪ್ ಅನ್ನು ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಅರ್ಪಿಸಿದ್ದಾರೆ.
  • ಹೊಸ ಭದ್ರತಾ ವೈಶಿಷ್ಟ್ಯ  ಸೇರ್ಪಡೆ ಆದ ನಂತರ ಟ್ರಾನ್ಸಾಕ್ಷನ್ ಗಾಗಿ ಮೊಬೈಲ್ ಅವಶ್ಯಕತೆಯು ಇರುವುದಿಲ್ಲ.
  • ವ್ಯಾಪಾರಿಗಳು ಬಯೋಮೆಟ್ರಿಕ್ ರೀಡರ್ ಗಳನ್ನು ಖರೀದಿಸಿ(ರೂ.2000), ಅದನ್ನು ತಮ್ಮ ಸ್ಮಾರ್ಟ್ ಫೋನ್ ಗೆ ಸಂಪರ್ಕ ಕಲ್ಪಿಸಬೇಕಿರುತ್ತದೆ. ನಂತರ ಗ್ರಾಹಕರು ತಮ್ಮ ಬಯೋಮೆಟ್ರಿಕ್ ರೀಡರ್ ಮೇಲೆ ಹೆಬ್ಬೆರಳನ್ನು ಒತ್ತಿದರೆ ಸಾಕು, ಟ್ರಾನ್ಸಾಕ್ಷನ್ ಸಂಪೂರ್ಣವಾಗುತ್ತದೆ.
  • ಈಗಾಗಲೇ 40 ಕೋಟಿ ಬ್ಯಾಂಕ್ ಅಕೌಂಟ್ ಗಳು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿವೆ.
    ಈ ಆಪ್ ಬಳಸುವುದರಿಂದ ಇತರೆ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಸುವಾಗ ವಿಧಿಸಲಾಗುತ್ತಿದ್ದ ಸೇವಾ ಶುಲ್ಕ ಉಳಿಯುತ್ತದೆ.
Loading...

Leave a Reply

Your email address will not be published.