ಬ್ರೇಕಿಂಗ್ ನ್ಯೂಸ್: ಇದು 2 ಸಾವಿರ ನೋಟಿನ ವಿಷಯ – News Mirchi

ಬ್ರೇಕಿಂಗ್ ನ್ಯೂಸ್: ಇದು 2 ಸಾವಿರ ನೋಟಿನ ವಿಷಯ

ಹಳೆಯ 500, 1000 ಮುಖಬೆಲೆಯ ನೋಟು ರದ್ದಾದ ನಂತರ ಬಿಡುಗಡೆಯಾದ 2000 ರೂ ನೋಟುಗಳನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಹಿಂಪಡೆಯುತ್ತದೆ. ಇಂತಹ ಹೇಳಿಕೆ ಬಂದಿರುವುದು ಬೇರೆ ಯಾರಿಂದಲೂ ಅಲ್ಲ, ನೋಟು ನಿಷೇಧ ತೀರ್ಮಾನದ ಹಿಂದಿನ ಮಾಸ್ಟರ್ ಮೈಂಡ್ ಅನಿಲ್ ಬೊಕಿಲ್ ಅವರಿಂದ.

ನೋಟು ನಿಷೇಧದ ಐಡಿಯಾ ಪ್ರಧಾನಿ ಮೋದಿಯವರಿಗೆ ನೀಡಿದ್ದು ಇದೇ ಅನಿಲ್ ಬೊಕಿಲ್ ಎಂಬ ಮಾತುಗಳಿವೆ. ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅನಿಲ್ ಬೊಕಿಲ್, ಹಳೆಯ ನೋಟುಗಳ ಅನಾಣ್ಯೀಕರಣದಿಂದ ಉಂಟಾಗುವ ನೋಟು ಕೊರತೆಯನ್ನು ತುಂಬಲು ಅಲ್ಪಾವಧಿಗೆ 2 ಸಾವಿರ ನೊಟುಗಳನ್ನು ಬಿಡುಗಡೆ ಮಾಡಲಾಯಿತು ಎಂದು ಹೇಳಿದ್ದಾರೆ.

2000 ರ ನೋಟುಗಳನ್ನು ಹಿಂಪಡೆಯಲಾಗುತ್ತದೆ ಎಂದು ಆರ್.ಎಸ್.ಎಸ್ ಸಂಪರ್ಕವಿರುವ ಆರ್ಥಿಕ ತಜ್ಞ ಎಸ್.ಗುರುಮೂರ್ತಿ ಯವರು ಹೇಳಿಕೆ ನೀಡಿದ ಬೆನ್ನಲ್ಲೇ ಬೊಕಿಲ್ ಅವರ ಹೇಳಿಕೆ ಮಹತ್ವ ಪಡೆದಿದೆ.

ನೋಟು ರದ್ದಾದ ಕೂಡಲೇ ಅಕ್ರಮ ಮಾರ್ಗದಲ್ಲಿ ತಮ್ಮಲ್ಲಿನ ಕಪ್ಪು ಹಣವನ್ನು ಭಾರೀ ಪ್ರಮಾಣದಲ್ಲಿ 2 ಸಾವಿರ ಮೌಲ್ಯದ ನೋಟುಗಳಿಗೆ ಪರಿವರ್ತಿಸಿಕೊಂಡ ಕಾಳಧನಿಕರಿಗೆ ಮತ್ತೆ ಕಷ್ಟ ತಪ್ಪಿದ್ದಲ್ಲ.

Loading...

Leave a Reply

Your email address will not be published.