ಲಾಲೂ ವಿರುದ್ಧ ಸಿಬಿಐ ಕೇಸ್, ಒಡಕಿನತ್ತ ನಿತೀಶ್, ಲಾಲೂ ಮೈತ್ರಿ? – News Mirchi

ಲಾಲೂ ವಿರುದ್ಧ ಸಿಬಿಐ ಕೇಸ್, ಒಡಕಿನತ್ತ ನಿತೀಶ್, ಲಾಲೂ ಮೈತ್ರಿ?

ಬಿಹಾರದ ಮಹಾಮೈತ್ರಿಕೂಟ ಒಡೆಯುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. 2015 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ಲಾಲೂ ಪ್ರಸಾದ್ ಅವರ ರಾಷ್ಟ್ರೀಯ ಜನತಾ ದಳ(ಆರ್.ಜೆ.ಡಿ) ಮತ್ತು ಕಾಂಗ್ರೆಸ್ ಕೈಜೋಡಿಸಿ ಬಿಜೆಪಿ ವಿರುದ್ಧ ಮೈತ್ರಿಕೂಟ ರಚಿಸಿಕೊಂಡಿದ್ದವು.

2006 ರಲ್ಲಿ ಲಾಲೂ ಪ್ರಸಾದ್ ಯಾದವ್ ರೈಲ್ವೇ ಸಚಿವರಾಗಿದ್ದ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಿಬಿಐ ಲಾಲೂ, ಅವರ ಪತ್ನಿ ರಾಬ್ರೀ ದೇವಿ, ಬಿಹಾರದ ಉಪಮುಖ್ಯಮಂತ್ರಿಯಾಗಿರುವ ಪುತ್ರ ತೇಜಸ್ವಿ ಯಾದವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬೆಳವಣಿಗೆಯಾಗುತ್ತಿದ್ದ ಬೆನ್ನಲ್ಲೇ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಕ್ಷದ ಹಿರಿಯ ನಾಯಕರು ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಈ ಯಂತ್ರವೊಂದಿದ್ದರೆ, ಯಾವ ನೀರನ್ನಾದರೂ ಕುಡಿದುಬಿಡಬಹುದು

ಎರಡು ವಾರಗಳ ಹಿಂದೆ ರಾಷ್ಟ್ರಪತಿ ಅಭ್ಯರ್ಥಿ ವಿಷಯದಲ್ಲಿ ಪ್ರತಿಪಕ್ಷಗಳಿಗೆ ಬೆನ್ನು ತಿರುಗಿಸಿ ಬಿಜೆಪಿಗೆ ಬೆಂಬಲಿಸಿದ್ದ ನಿತೀಶ್ ಕುಮಾರ್, ಲಾಲೂ ಪಕ್ಷದ ಜೊತೆ ಮೈತ್ರಿ ಕಡಿದುಕೊಳ್ಳುತ್ತಾರೆಯೇ ಅಥವಾ, ಕಳೆದ ಚುನಾವಣೆಯಲ್ಲಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ತಮ್ಮನ್ನು ಮುಖ್ಯಮಂತ್ರಿಯಾಗಿ ಬೆಂಬಲಿಸಿದ ಆರ್.ಜೆ.ಡಿ ಮೈತ್ರಿ ಮುಂದುವರೆಸುತ್ತಾರೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಸದ್ಯದ ಬೆಳವಣಿಗಗಳ ಬಗ್ಗೆ ನಿತೀಶ್ ಮೌನಕ್ಕೆ ಶರಣಾಗಿದ್ದು, ಪಕ್ಷದ ವಕ್ತಾರರಿಗೂ ಈ ಕುರಿತು ಯಾವುದೇ ಹೇಳಿಕೆ ನೀಡದಂತೆ ಸೂಚಿಸಿದ್ದಾರೆ.

ಒಂದು ವೇಳೆ ಲಾಲೂ ಪಕ್ಷದ ಜತೆಗಿನ ಮೈತ್ರಿಯನ್ನು ಕಡಿದುಕೊಂಡಿದ್ದೇ ಆದಲ್ಲಿ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಮುಂದುವರೆಯುವ ಸಾಧ್ಯತೆ ಇದೆ. ಇಷ್ಟಕ್ಕೂ ಬಿಜೆಪಿ ಜೊತೆಗಿನ ಮೈತ್ರಿ ನಿತೀಶ್ ಗೆ ಹೊಸದೇನೂ ಅಲ್ಲ. 2014 ರ ಲೋಕಸಭೆ ಚುನಾವಣೆಗೆ ಹೋಗುವರೆಗೂ ನಿತೀಶ್ ರವರ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟ ಸರ್ಕಾರವೇ ರಾಜ್ಯದಲ್ಲಿದ್ದದ್ದು.

ಮೋದಿ ಇಸ್ರೇಲ್ ಪ್ರವಾಸ, ಆತಂಕದಲ್ಲಿ ಪಾಕಿಸ್ತಾನ

Loading...