ಆತ್ಮಹತ್ಯೆಗೂ ಮುನ್ನ ಕಲೆಕ್ಟರ್ ಸೆಲ್ಫೀ ವೀಡಿಯೋ – News Mirchi

ಆತ್ಮಹತ್ಯೆಗೂ ಮುನ್ನ ಕಲೆಕ್ಟರ್ ಸೆಲ್ಫೀ ವೀಡಿಯೋ

ಮೊನ್ನೆ ಆತ್ಮಹತ್ಯೆಗೆ ಶರಣಾದ ಬಿಹಾರದ ಬಕ್ಸರ್ ಜಿಲ್ಲಾಧಿಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವೀಡಿಯೋ ಪೊಲೀಸರಿಗೆ ಲಭ್ಯವಾಗಿದೆ. ತನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ ಎಂದು ಪತ್ರದಲ್ಲಿ ಬರೆದಿಟ್ಟಿದ್ದ ಅವರು, ಸಾಯುವ ಮುನ್ನ ಸೆಲ್ಫೀ ವೀಡಿಯೋ ಒಂದನ್ನು ರೆಕಾರ್ಡ್ ಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಆ ವೀಡಿಯೋವನ್ನು ಪೊಲೀಸರು ಇದೀಗ ವಶಪಡಿಸಿಕೊಂಡಿದ್ದಾರೆ.

32 ವರ್ಷದ ಮುಖೇಶ್ ಪಾಂಡೆ ಇತ್ತೀಚೆಗಷ್ಟೇ ಬಕ್ಸರ್ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದರು. ಅಲ್ಲಿಯೇ ಅವರು ಈ ವೀಡಿಯೋವನ್ನು ಚಿತ್ರೀಕರಿಸಿದ್ದಾಗಿ ತಿಳಿದುಬಂದಿದೆ. ತನ್ನ ಮಗು, ಪತ್ನಿ ತನ್ನನ್ನು ತುಂಬಾ ಪ್ರೀತಿಸುತ್ತಿದ್ದಾರೆ ಎಂದು ಆ ವೀಡಿಯೋದಲ್ಲಿ ರೆಕಾರ್ಡ್ ಮಾಡಿದ್ದಾರೆ. ಇದರಿಂದಾಗಿ ಮಾನಸಿಕವಾಗಿ ಖಿನ್ನತೆಗೊಳಗಾಗಿಯೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಗುರುವಾರ ಮಧ್ಯಾಹ್ನ ಲೀಲಾ ಪ್ಯಾಲೇಸ್ ಹೋಟೆಲಿನಿಂದ ಮಾಲ್ ಒಂದರ ಬಳಿಗೆ ಹೋಗಲು ಕ್ಯಾಬ್ ಅನ್ನು ಅವರು ಬುಕ್ ಮಾಡಿದ್ದರು. ಅಲ್ಲಿ ವಾಟ್ಸಾಪ್ ನಲ್ಲಿ ಸಂಬಂಧಿಕರಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಷಯವನ್ನು ತಿಳಿಸಿದ್ದಾರೆ. ಸಂಬಂಧಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮಾಲ್ ಬಳಿಗೆ ಬರುವ ಮುನ್ನವೇ ಮುಖೇಶ್ ಮಾಲ್ ಬಿಟ್ಟು ತೆರಳಿದ್ದರು. ಸಿಸಿಟಿವಿ ಫೂಟೇಜ್ ಗಳಲ್ಲಿ ನೀಲಿ ಬಣ್ಣದ ಟೀ ಶರ್ಟ್, ಜೀನ್ಸ್ ಧರಿಸಿದ್ದ ಪಾಂಡೆ ಘಾಜಿಯಾಬಾದ್ ಮೆಟ್ರೋ ಕಡೆ ಹೋಗಿದ್ದಾಗಿ ದೃಶ್ಯಗಳು ಸೆರೆಯಾಗಿವೆ. ಆ ನಂತರ ಪೊಲೀಸರು ರೈಲ್ವೇ ಹಳಿಯ ಮೇಲೆ ಮುಖೇಶ್ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.

ಆಲ್ ಇಂಡಿಯಾ ಸಿವಿಲ್ಸ್ ಸರ್ವೀಸ್ ಪರೀಕ್ಷೆಯಲ್ಲಿ 14ನೇ ರ್ಯಾಂಕ್ ಪಡೆದ ಮುಖೇಶ್ ಪಾಂಡೆ, ದಕ್ಷ ಅಧಿಕಾರಿಯಾಗಿ ಸಿಎಂ ನಿತೀಶ್ ಕುಮಾರ್ ಅವರಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಮನುಷ್ಯನಾದವನಿಗೆ ಈ ಭೂಮಿಯ ಮೇಲೆ ಬದುಕಲು ಸಾಧ್ಯವಿಲ್ಲ, ತನಗೆ ಬದುಕುವ ಆಸೆ ಸತ್ತಿದೆ, ತನ್ನ ಸಾವಿನ ಕುರಿತು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ ಎಂದು ಪಾಂಡೆ ತಮ್ಮ ಸೂಸೈಡ್ ನೋಟ್ ನಲ್ಲಿ ಹೇಳಿದ್ದಾರೆ.

Loading...