ವಿಚಿತ್ರ ಮಗುವಿಗೆ ಜನ್ಮ ನೀಡಿದ ಖಲೀದಾ ಬೇಗಂ, ಹನುಮಂತನ ಅವತಾರ ಎಂದು ನಂಬಿಕೆ! |News Mirchi

ವಿಚಿತ್ರ ಮಗುವಿಗೆ ಜನ್ಮ ನೀಡಿದ ಖಲೀದಾ ಬೇಗಂ, ಹನುಮಂತನ ಅವತಾರ ಎಂದು ನಂಬಿಕೆ!

ಪಾಟ್ನಾ: ಪುಟ್ಟ ತಲೆ, ಹೆಡ್ ಲೈಟ್ ನಂತಹ ಕಣ್ಣು, ದೊಡ್ಡ ಮೂಗು, ದಪ್ಪ ಕೆನ್ನೆ ಹೊಂದಿರುವ ವಿಚಿತ್ರ ಮಗುವೊಂದರ ಜನನವಾಗಿದೆ. ಬಿಹಾರದ ಕತಿಯಾರ್ ನಿವಾಸಿ ಖಲೀದಾ ಬೇಗಂ ಸೋಮವಾರ ರಾತ್ರಿ ಈ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದಾರೆ.

ಮಗುವನ್ನು ಅನ್ಯಗ್ರಹ ಜೀವಿಯಾಗಿ ಭಾವಿಸಿದ ಮಹಿಳೆ, ಮೊದಲು ಮಗುವಿಗೆ ಹಾಲುಣಿಸಲು ನಿರಾಕರಿಸಿದ್ದಾಳೆ. ಕಣ್ಣ ಮುಂದೆ ಆ ಮಗುವು ಇರಬಾರದು, ಇಲ್ಲಿಂದ ತೆಗೆದುಕೊಂಡು ಹೋಗಿ ಎಂದು ಆಕೆ ವೈದ್ಯರಿಗೆ ಕೇಳಿಕೊಂಡಿದ್ದಾಳೆ. ಆದರೆ ಆಕೆಯ ಪತಿ ಮೊಹಮದ್ ಇಮ್ತಿಯಾಜ್ ಮತ್ತಿತರ ಜನರು ಮಾತ್ರ ಇದು ಹನುಮಂತನ ಅವತಾರವೆಂದು ನಂಬಿದ್ದಾರೆ. . ಮಗುವಿಗೆ ಮೆದುಳು, ತಲೆಬುರುಡೆ ಇಲ್ಲ, ದೇಹದ ಹಲವು ಭಾಗಗಳು ಸಂಪೂರ್ಣ ಬೆಳವಣಿಗೆಯಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಈಗಾಗಲೇ ಆಕೆಗೆ ನಾಲ್ವರು ಮಕ್ಕಳಿದ್ದಾರೆ

Loading...
loading...
error: Content is protected !!