ಕೇಜ್ರಿವಾಲ್ ಬೂಟಾಟಿಕೆಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಬೂಟು!

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಹುಟ್ಟು ಹಬ್ಬದ ಉಡುಗೊರೆಯಾಗಿ ಬಿಜೆಪಿ ಸದಸ್ಯರೊಬ್ಬರು ಬೂಟುಗಳನ್ನು ಕಳುಹಿಸಿದ್ದಾರೆ. ಕೇಜ್ರಿವಾಲ್ ಅವರ ಬೂಟಾಟಿಕೆಯನ್ನು ಪ್ರತಿಭಟಿಸಲು ಬಿಜೆಪಿ ರಾಘವ್ ಮಂಡಲ್ ಎಂಬುವವರು ಈ ಮಾರ್ಗ ಆಯ್ಕೆ ಮಾಡಿಕೊಂಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು ಜಾಗಿಂಗ್ ಗಾಗಿ ಬೆಲೆ ಬಾಳುವ ಶೂ ಧರಿಸುತ್ತಾರೆ. ಆದರೆ ಸಾರ್ವಜನಿಕರ ಎದುರು ಸಾಮಾನ್ಯ ಚಪ್ಪಲಿ ಧರಿಸಿ ಬರುತ್ತಾರೆ. ಅವರ ಈ ಬೂಟಾಟಿಕೆ ವರ್ತನೆಯನ್ನು ಸಾಂಕೇತಿಕವಾಗಿ ವಿರೋಧಿಸಲು ತಾವು ಆನ್ಲೈನ್ ನಲ್ಲಿ ಒಂದು ಜೊತೆ ಲೆದರ್ ಶೂ ಖರೀದಿಸಿ ಅವರ ಹುಟ್ಟು ಹಬ್ಬದ ಉಡುಗೊರೆಯಾಗಿ ನೀಡುತ್ತಿರುವುದಾಗಿ ಮಂಡಲ್ ಹೇಳಿದ್ದಾರೆ.