ಯೋಗಿಗೆ ಒಲಿದ ಉತ್ತರ ಪ್ರದೇಶ

ತುಂಬಾ ಕುತೂಹಲ ಮೂಡಿಸಿದ್ದ ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಆಯ್ಕೆ ಮುಗಿದಿದೆ. ಬಿಜೆಪಿ ಹಿರಿಯ ನಾಯಕರು ಮತ್ತು 80 ಶಾಸಕರು ಸೇರಿದ್ದ ಸಭೆಯಲ್ಲಿ ಸಂಸದ ಯೋಗಿ ಆದಿತ್ಯನಾಥ್ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಮುಂದಿನ 5 ವರ್ಷಗಳ ಕಾಲ ಉತ್ತರಪ್ರದೇಶದಲ್ಲಿ ಹಿಂದೂ ನಾಯಕ ಆಡಳಿತ ನಡೆಸಲಿದ್ದಾರೆ. 2019 ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ತುಂಬಾ ಮಹತ್ವದ್ದಾಗಿತ್ತು.

ಉತ್ತರ ಪ್ರದೇಶದ ಗೋರಖ್‌ಪುರದಿಂದ ಯೋಗಿ ಆದಿತ್ಯನಾಥ್ 5 ಬಾರಿ ಸಂಸತ್‌ಗೆ ಆಯ್ಕೆಯಾಗಿದ್ದಾರೆ. ಗೋರಖ್‌ನಾಥ್ ಮಠದ ಮುಖ್ಯಸ್ಥರೂ ಆಗಿರುವ ಆದಿತ್ಯನಾಥ್, ರಜಪೂತ ಕುಟುಂಬದಿಂದ ಬಂದವರು. ಹೆಚ್.ಎನ್.ಬಿ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವೀಧರರಾಗಿದ್ದಾರೆ.

ಕೇಶವ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮ ಅವರು ಉಪ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

Related News

Loading...

Leave a Reply

Your email address will not be published.

error: Content is protected !!