ಚಾಮರಾಜನಗರ ಬಿಜೆಪಿ ಉಸ್ತುವಾರಿಯಾಗಿ ವಿ.ಸೋಮಣ್ಣ – News Mirchi

ಚಾಮರಾಜನಗರ ಬಿಜೆಪಿ ಉಸ್ತುವಾರಿಯಾಗಿ ವಿ.ಸೋಮಣ್ಣ

ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಚಾಮರಾಜನಗರ ಜಿಲ್ಲೆಯ ಬಿಜೆಪಿ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಅಷ್ಟೇ ಅಲ್ಲದೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರನ್ನಾಗಿಯೂ ನೇಮಕ ಮಾಡಲಾಗಿದೆ. ಬಿಜೆಪಿ ಮೂಲಗಳ ಪ್ರಕಾರ ವಿ.ಸೋಮಣ್ಣ ಅವರು ಜಿಲ್ಲೆಯ ಹನೂರು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಈ ಹಿಂದೆ ವಿಜಯನಗರ ಮತ್ತು ಗೋವಿಂದರಾಜ ನಗರ ಎರಡೂ ಕ್ಷೇತ್ರಗಳಿಂದ ಸೋಲನನ್ನುಭವಿಸಿರುವ ಸೋಮಣ್ಣ, ಇದೀಗ ಲಿಂಗಾಯತರು ಹೆಚ್ಚಾಗಿರುವ ಹನೂರು ಕ್ಷೇತ್ರದಿಂದ ಸ್ಪರ್ಧಿಸಲು ಒಲವು ತೋರಿಸಿದ್ದಾರೆ ಎನ್ನಲಾಗುತ್ತಿದೆ.

Get Latest updates on WhatsApp. Send ‘Add Me’ to 8550851559

Contact for any Electrical Works across Bengaluru

Loading...
error: Content is protected !!