ಭನ್ಸಾಲಿ ‘ಪದ್ಮಾವತಿ’ಗೆ ಮುಂದುವರೆದ ಸಂಕಷ್ಟಗಳು – News Mirchi

ಭನ್ಸಾಲಿ ‘ಪದ್ಮಾವತಿ’ಗೆ ಮುಂದುವರೆದ ಸಂಕಷ್ಟಗಳು

ಬಾಲಿವುಡ್ ಸಿನಿ ಪ್ರಿಯರು ಕುತೂಹಲದಿಂದ ಕಾಯುತ್ತಿರುವ ಸಂಜಯ್ ಲೀಲಾ ಭನ್ಸಾಲಿ ಚಿತ್ರ “ಪದ್ಮಾವತಿ”ಗೆ ಕಷ್ಟಗಳು ಮುಂದುವರೆದಿವೆ. ಚಿತ್ರೀಕರಣ ಸಂದರ್ಭದಲ್ಲಿಯೇ ರಾಣಿ ಪದ್ಮಾವತಿ ಇತಿಹಾಸವನ್ನು ತಿರುಚಿ ಸಿನಿಮಾ ತೆಗೆದಿದ್ದಾರೆ ಎಂದು ರಜಪೂತರು ಚಿತ್ರ ಯೂನಿಟ್ ಮೇಲೆ ದಾಳಿ ನಡೆಸಿದ್ದರು.

ಇದೀಗ ಬಿಜೆಪಿ ಕೂಡಾ ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿ ಕೇಂದ್ರ ಚುನಾವಣಾ ಆಯೋಗ, ಕೇಂದ್ರ ಸೆನ್ಸಾರ್ ಬೋರ್ಡ್(ಸಿಬಿಎಫ್ಸಿ) ಗೆ ಪತ್ರ ಬರೆಯಲು ಸಿದ್ಧವಾಗುತ್ತಿದೆ. ಭನ್ಸಾಲಿ ನಿರ್ದೇಶಿಸಿದ ಈ ಐತಿಹಾಸಿಕ ಚಿತ್ರದ ಬಿಡುಗಡೆಯನ್ನು ಮುಂದೂಡಬೇಕು ಎಂದು ಪತ್ರ ಬರೆಯಲು ತೀರ್ಮಾನಿಸಿರುವುದಾಗಿ ಬಿಜೆಪಿ ಅಧಿಕೃತ ವಕ್ತಾರ ಐ.ಕೆ.ಜಡೇಜಾ ಹೇಳಿದ್ದಾರೆ.

[ಇದನ್ನೂ ಓದಿ: ಕಮಲ್ ಮಾನಸಿಕ ಪರಿಸ್ಥಿತಿ ಸರಿಯಿಲ್ಲ, ಆಸ್ಪತ್ರೆಗೆ ದಾಖಲಿಸಿ]

ಕ್ಷತ್ರಿಯ ಸಮುದಾಯದ ಭಾವನೆಗಳಿಗೆ ಧಕ್ಕೆ ಬರುವಂತೆ ಈ ಚಿತ್ರ ಮಾಡಲಾಗಿದೆ ಎಂಬ ಆರೋಪಗಳು ಬರುತ್ತಿವೆ, ರಾಣಿ ಪದ್ಮಾವತಿ ಮತ್ತು ಆಕ್ರಮಣ ನಡೆಸಿದ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ ನಡುವೆ ಸಂಬಂಧವಿರುವುದಾಗಿ ಈ ಚಿತ್ರದಲ್ಲಿ ತೋರಿಸಿ ಇತಿಹಾಸವನ್ನು ತಿರುಚಲಾಗಿದೆ ಎಂಬ ಆರೋಪಗಳಿವೆ. ಈ ವಿವಾದ ಬಗೆಹರಿಯುವವರೆಗೂ ಚಿತ್ರ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಬೇಕೆಂದು ಚುನಾವಣಾ ಆಯೋಗ ಮತ್ತು ಸೆನ್ಸಾರ್ ಬೋರ್ಡ್ ಗೆ ಮನವಿ ಮಾಡಲಿದ್ದೇವೆ ಎಂದು ಅವರು ಹೇಳಿದರು.

Get Latest updates on WhatsApp. Send ‘Add Me’ to 8550851559

Loading...