ಇದೇ ಮೊದಲ ಬಾರಿಗೆ ಇಲ್ಲಿ ಅತ್ಯಧಿಕ ಸ್ಥಾನ ಗಳಿಸಿದ ಬಿಜೆಪಿ |News Mirchi

ಇದೇ ಮೊದಲ ಬಾರಿಗೆ ಇಲ್ಲಿ ಅತ್ಯಧಿಕ ಸ್ಥಾನ ಗಳಿಸಿದ ಬಿಜೆಪಿ

ಶಿಮ್ಲಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಇದರಿಂದಾಗಿ ಹಿಮಾಚಲ ಪ್ರದೇಶದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಗೆ ತೀವ್ರ ಹಿನ್ನೆಡೆಯಾಗಿದೆ. ಶನಿವಾರ ಬಹಿರಂಗವಾದ ಶಿಮ್ಲಾ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದಲ್ಲಿ ಮೊಟ್ಟ ಮೊದಲ ಬಾರಿಗೆ ಅತ್ಯಧಿಕ ಸ್ಥಾನ ಗಳಿಸಿದೆ. 34 ಸ್ಥಾನಗಳಿರುವ ಶಿಮ್ಲಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 17 ಸ್ಥಾನಗಳನ್ನ ಗೆದ್ದಿದೆ. ಬಹುಮತಕ್ಕೆ (18) ಕೇವಲ ಒಂದು ಸ್ಥಾನದ ಅಂತರದಲ್ಲಿ ಬಿಜೆಪಿ ಇದೆ. ಬಿಜೆಪಿ ಕಟ್ಟಾ ವೈರಿ ಕಾಂಗ್ರೆಸ್ ಪಕ್ಷ 12 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. 26 ವರ್ಷಗಳಿಂದ ನಗರ ಪಾಲಿಕೆಯಲ್ಲಿ ಅಧಿಪತ್ಯ ಸಾಧಿಸುತ್ತಾ ಬಂದಿದ್ದ ಕಾಂಗ್ರೆಸ್ 2012 ರಲ್ಲಿ ಅಧಿಕಾರ ಕಳೆದುಕೊಂಡಿತ್ತು.

ಈಗ ನಡೆದಿರುವ ಚುನಾವಣೆಯಲ್ಲಿ ನಾಲ್ವರು ಪಕ್ಷೇತರ ಅಭ್ಯರ್ಥಿಗಳು, ಒಬ್ಬ ಸಿಪಿಎಂ ಅಭ್ಯರ್ಥಿ ಜಯಗಳಿಸಿದ್ದಾರೆ. ಪಕ್ಷೇತರರಲ್ಲಿ ಮೂವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿದರೂ, ಅವರನ್ನೂ ಸೇರಿಸಿದರೆ ಕಾಂಗ್ರೆಸ್ ಬಲ 15 ಕ್ಕೇರುತ್ತದೆ. ಹಾಗಾಗಿ ಬಹುಮತದ ಮಾತು ದೂರವೇ ಉಳಿಯಿತು. ಬಹುಮತಕ್ಕೆ ಒಂದು ಸ್ಥಾನದ ಕೊರತೆ ಇರುವ ಬಿಜೆಪಿ ಮಾತ್ರ, ಒಬ್ಬ ಪಕ್ಷೇತರ ಅಭ್ಯರ್ಥಿ ಬೆಂಬಲ ತಮಗಿದ್ದು ಶಿಮ್ಲಾ ಮಹಾನಗರ ಪಾಲಿಕೆ ನಮ್ಮದೇ ಎಂದು ಹೇಳಿದೆ.

2012ರಲ್ಲಿ ನೇರ ಚುನಾವಣೆ ಪದ್ದತಿಯಲ್ಲಿ ಮೇಯರ್, ಉಪ ಮೇಯರ್ ಹುದ್ದೆಗಳಿಗೆ ಮತದಾನ ನಡೆಸಿದಾಗ ಸಿಪಿಎಂ ಆಶ್ಚರ್ಯಕರ ರೀತಿಯಲ್ಲಿ ಈ ಹುದ್ದೆಗಳನ್ನು ಕೈವಶ ಮಾಡಿಕೊಂಡಿತ್ತು. ಈ ಬಾರಿ ಪರೋಕ್ಷ ಪದ್ದತಿಯಲ್ಲಿ ಬಹುಮತದ ಆಧಾರದಲ್ಲಿ ಚುನಾವಣೆ ನಡೆಸಿದ್ದು, ಈ ಬಾರಿ ಕಮಲ ಅರಳಿರುವುದು ಗಮನಾರ್ಹ.

Loading...
loading...
error: Content is protected !!