ಗೋವಾ ಸರ್ಕಾರ ಶೀಘ್ರ ಪತನ : ಶಿವಸೇನೆ |News Mirchi

ಗೋವಾ ಸರ್ಕಾರ ಶೀಘ್ರ ಪತನ : ಶಿವಸೇನೆ

ಗೋವಾದಲ್ಲಿನ ಮನೋಹರ್ ಪರಿಕ್ಕರ್ ನೇತೃತ್ವದ ಬಿಜೆಪಿ ಸರ್ಕಾರ ಶೀಘ್ರದಲ್ಲಿ ಪತನವಾಗುತ್ತದೆ ಎಂದು ಶಿವಸೇನಾ ರಾಷ್ಟ್ರೀಯ ವಕ್ತಾರ ಸಂಜಯ್ ರಾವತ್ ಭವಿಷ್ಯ ನುಡಿದಿದ್ದಾರೆ. ಗೋವಾದಲ್ಲಿರುವ ಬಿಜೆಪಿ ಮೈತ್ರಿಕೂಟವನ್ನು ಅವರು ಅಕ್ರಮಕೂಟ ಎಂದು ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಸರ್ಕಾರ ರಚಿಸಲು ಮನೋಹರ್ ಪರಿಕ್ಕರ್ ಕೇಂದ್ರದಲ್ಲಿ ರಕ್ಷಣಾ ಖಾತೆಯನ್ನು ತೊರೆದು ಬಂದಿದ್ದಾರೆ. ಆದರೆ ಗೋವಾದಲ್ಲಿ ಸರ್ಕಾರ ಸ್ಥಿರವಾಗಿರುವುದಿಲ್ಲ ಎಂಬುದು ಅವರಿಗೂ ಗೊತ್ತು, ಬಿಜೆಪಿ ಪ್ರಜೆಗಳ ತೀರ್ಪನ್ನು ತಿರಸ್ಕರಿಸಿದೆ ಎಂದು ಟೀಕಿಸಿದರು. ಬಿಜೆಪಿ ವಿರುದ್ಧವಾಗಿ ಚುನಾವಣೆಗೆ ಸ್ಪರ್ಧಿಸಿ ಫಲಿತಾಂಶದ ನಂತರ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಎಂಜಿಪಿ ಮತ್ತು ಗೋವಾ ಫಾರ್ವರ್ಡ್ ಪಾರ್ಟಿ ದ್ರೋಹಿಗಳು ಎಂದು ಜರೆದರು.

ಗೋವಾದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 13 ಸ್ಥಾನ ಗಳಿಸಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ, ಇತರೆ ಸಣ್ಣ ಪಕ್ಷಗಳು, ಪಕ್ಷೇತರ ಶಾಸಕರ ನೆರವಿನೊಂದಿಗೆ ಪರಿಕ್ಕರ್ ನೇತೃತ್ವದಲ್ಲಿ ಸರ್ಕಾರ ರಚಿಸಿತ್ತು.

Loading...
loading...
error: Content is protected !!