ನೋಟು ರದ್ದು ಗೊಂದಲ ನಿವಾರಿಸಲು, ಗ್ರಾಮೀಣ ಪ್ರದೇಶಗಳಿಗೆ ಬಿಜೆಪಿ – News Mirchi

ನೋಟು ರದ್ದು ಗೊಂದಲ ನಿವಾರಿಸಲು, ಗ್ರಾಮೀಣ ಪ್ರದೇಶಗಳಿಗೆ ಬಿಜೆಪಿ

ನೋಟು ರದ್ದು ಕ್ರಮ ಮತ್ತು ಅದರಿಂದಾಗುವ ದೀರ್ಘಕಾಲದ ಲಾಭಗಳ ಬಗ್ಗೆ ಗ್ರಾಮೀಣ ಪ್ರದೇಶದ ಜನರಿಗೂ ಸೂಕ್ತ ಮಾಹಿತಿ ನೀಡುವ ಮೂಲಕ ಜನರಿಂದ ಎದುರಾಗಬಹುದಾದ ನಕಾರಾತ್ಮಕ ಗೊಂದಲಗಳನ್ನು ದೂರ ಮಾಡಲು ಮೋದಿ ಸರ್ಕಾರ ಚಿಂತನೆ ನಡೆಸಿದೆ.

ಕೇವಲ ನಗರ ಪ್ರದೇಶಗಳಲ್ಲಿ ಕೂತು ಮಾತನಾಡಿದರೆ ಪ್ರಯೋಜನವಾಗುವುದಿಲ್ಲ ಎಂಬುದನ್ನು ಮನಗಂಡಿರುವ ಬಿಜೆಪಿ, ದೇಶದ ಎಲ್ಲಾ ಪ್ರದೇಶಗಳ ಜನರನ್ನು ತಲುಪಿ ಅವರಲ್ಲಿನ ಗೊಂದಲಗಳನ್ನು ಬಗೆಹರಿಸಲು ತೀರ್ಮಾನಿಸಿದೆ.

ಚಳಿಗಾಲದ ಅಧಿವೇಶನ ಡಿಸೆಂಬರ್ 16 ರಂದು ಮುಗಿಯಲಿದ್ದು, ನಂತರ ಪಕ್ಷದ ನಾಯಕರು, ಕಾರ್ಯಕರ್ತರು, ಸ್ವಯಂಸೇವಕರು ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ನೋಟು ರದ್ದು ಕ್ರಮದಿಂದಾಗುವ ಲಾಭಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಲಿದ್ದಾರೆ ಎಂದು ಕೇಂದ್ರ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!