ಬೀಫ್ ಸಾಗಿಸುತ್ತಿದ್ದ ವ್ಯಕ್ತಿಯ ಕೊಲೆ ಪ್ರಕರಣ: ಬಿಜೆಪಿ ಮುಖಂಡನ ಬಂಧನ

ರಾಂಚಿ: ಬೀಫ್ ಹೊತ್ತೊಯ್ಯುತ್ತಿದ್ದ ಎಂದು ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದ ಪ್ರಕರಣದಲ್ಲಿ ಝಾರ್ಖಂಡ್ ಬಿಜೆಪಿ ಮುಖಂಡರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ರಾಮಗಢದ ಬಿಜೆಪಿ ಮೀಡಿಯಾ ಇನ್ಚಾರ್ಜ್ ನಿತ್ಯಾನಂದ್ ಮೆಹತಾ ಸೇರಿದಂತೆ ಮತ್ತಿಬ್ಬರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.

ರಾಮಗಢದಲ್ಲಿನ ಜಬಾರ್ ಟಾಂಟ್ ಪ್ರದೇಶದಲ್ಲಿ ಕಳೆದ ಗುರುವಾರ ಅಸ್ಗರ್ ಅನ್ಸಾರಿ ಎಂಬಾತ ವ್ಯಾನಿನನಲ್ಲಿ ಗೋಮಾಂಸ ಸಾಗಿಸುತ್ತಿದ್ದಾನೆ ಎಂದು ಆರೋಪಿಸಿ ಕೆಲ ದುಷ್ಕರ್ಮಿಗಳು ಅಡ್ಡಿಪಡಿಸಿದ್ದರು. ಆತನನ್ನು ವಾಹನದಿಂದ ಹೊರಗೆಳೆದು ದಾರುಣವಾಗಿ ಹಲ್ಲೆ ಮಾಡಿ ವ್ಯಾನಿಗೆ ಬೆಂಕಿ ಹಚ್ಚಿದ್ದರು. ಕೂಡಲೇ ಘಟನೆ ನಡೆದ ಸ್ಥಳಕ್ಕೆ ಬಂದು ಪೊಲೀಸರು, ಹಲ್ಲೆಗೊಳಗಾದ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಆ ವ್ಯಕ್ತಿ ಸಾವನ್ನಪ್ಪಿದ್ದರು.

ದಾಳಿ ನಡೆಸಿದ್ದು ಬಿಜೆಪಿ ಮುಖಂಡ ನಿತ್ಯಾನಂದ ಎಂದು ಪೊಲೀಸರು ತೀರ್ಮಾನಕ್ಕೆ ಬಂದಿದ್ದಾರೆ. ಅನ್ಸಾರಿಯನ್ನು ವ್ಯಾನಿನಿಂದ ಹೊರಗೆ ಎಳೆದು ನಿತ್ಯಾನಂದ ದಾಳಿ ನಡೆಸಿದ್ದನ್ನು ಗುರಿತಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಗೋ ರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುವುದು ಸಹಿಸಲಾರದು ಎಂದು ಮೋದಿ ಹೇಳಿದ ಕೆಲ ಗಂಟೆಗಳಲ್ಲೇ ಈ ಘಟನೆ ನಡೆದಿತ್ತು.